ಕರ್ನಾಟಕ

karnataka

ETV Bharat / sitara

ತೆಲುಗಿನಲ್ಲೂ ಬಿಡುಗಡೆಯಾಯ್ತು 'ಪೊಗರು' ಚಿತ್ರದ ಕರಾಬು ಹಾಡು - Rashmika mandanna Pogaru movie

ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಪೊಗರು' ಚಿತ್ರದ ತೆಲುಗು ಕರಾಬು ಹಾಡನ್ನು ಆನಂದ್ ಆಡಿಯೋ ತನ್ನ ಯೂಟ್ಯೂಬ್​​​ನಲ್ಲಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಟಾಲಿವುಡ್​​​ನಲ್ಲಿ ಕೂಡಾ ಕರಾಬು ಹಾಡು ಸಖತ್ ಕ್ರೇಜ್ ಹುಟ್ಟುಹಾಕಿದೆ.

Karabu song released in Telugu
ಕರಾಬು ಹಾಡು

By

Published : Aug 6, 2020, 6:53 PM IST

Updated : Aug 6, 2020, 10:14 PM IST

ನಂದ ಕಿಶೋರ್ ನಿರ್ದೇಶನದಲ್ಲಿ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾವನ್ನು ನೋಡಲು ಸಿನಿಪ್ರಿಯರು ಕಾಯುತ್ತಲೇ ಇದ್ದಾರೆ. ಆದರೆ ಚಿತ್ರೀಕರಣ ಆರಂಭವಾಗಿ 2 ವರ್ಷಗಳು ಕಳೆದರೂ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಕೊರೊನಾ ವೈರಸ್ ಕಾಟದಿಂದ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ.

ಸಿನಿಮಾ ಬಿಡುಗಡೆಯಾಗದಿದ್ದರೂ ಚಿತ್ರದ ಮೇಲಿನ ಕ್ರೇಜ್​ ಅಂತೂ ಅಭಿಮಾನಿಗಳಿಗೆ ಕಡಿಮೆ ಆಗಿಲ್ಲ. ಚಿತ್ರತಂಡ ಅಭಿಮಾನಿಗಳಿಗೆ ನಿರಾಶೆಯಾಗಬಾರದು ಎಂಬ ಕಾರಣಕ್ಕೆ ಕರಾಬು ಹಾಡನ್ನು ಏಪ್ರಿಲ್​​​ನಲ್ಲಿ ಬಿಡುಗಡೆ ಮಾಡಿತ್ತು. ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 50 ಮಿಲಿಯನ್ ವೀಕ್ಷಣೆ ಕೂಡಾ ಪಡೆದಿತ್ತು.

ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ

ಇನ್ನು ಕರಾಬು ಹಾಡು, ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಕೂಡಾ ಹವಾ ಎಬ್ಬಿಸಿದೆ. ಆನಂದ್ ಆಡಿಯೋ ತನ್ನ ಯೂಟ್ಯೂಬ್​​​ನಲ್ಲಿ ನಿನ್ನೆ ಈ ಹಾಡನ್ನು ಬಿಡುಗಡೆ ಮಾಡಿದೆ. ಒಂದು ದಿನದಲ್ಲೇ ಈ ಹಾಡು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಕನ್ನಡದಲ್ಲಿ ಈ ಹಾಡಿಗೆ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿ ಅವರೇ ಹಾಡಿದ್ದರು. ತೆಲುಗಿನಲ್ಲಿ ಭಾಸ್ಕರಬಟ್ಲ ರವಿ ಸಾಹಿತ್ಯ ಬರೆದಿದ್ದು ಅನುರಾಗ್ ಕುಲಕರ್ಣಿ ಹಾಡನ್ನು ಹಾಡಿದ್ದಾರೆ.

ಕರಾಬು ಹಾಡು

ಶ್ರೀ ಜಗದ್ಗುರು ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ. ಗಂಗಾಧರ್ ನಿರ್ಮಿಸಿರುವ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧ್ರುವಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

Last Updated : Aug 6, 2020, 10:14 PM IST

ABOUT THE AUTHOR

...view details