ಹೊಸ ತಂಡದ ಭಿನ್ನ ಕತೆಯುಳ್ಳ 'ಕಪಟ ನಾಟಕ ಪಾತ್ರಧಾರಿ' ಚಿತ್ರದ ಆಡಿಯೋ ರಿಲೀಸ್ ಆಗಿದೆ. ನಿನ್ನೆ ಬೆಂಗಳೂರಿನ ರೇಡಿಯೋ ಸಿಟಿ 91.1 ಎಫ್ಎಂನಲ್ಲಿ ವಿನೂತನವಾಗಿ ನಡೆದ ಬಿಡುಗಡೆ ಕಾರ್ಯಕ್ರಮವು ನಟ ರಿಷಿ ಅವರು ಧ್ವನಿಸುರಳಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಕಪಟ ನಾಟಕ ಪಾತ್ರಧಾರಿ ಆಡಿಯೋ ಬಿಡುಗಡೆಗೆ ರಿಷಿ ಸಾಥ್ - ಆಪರೇಷನ್ ಅಲಮೇಲಮ್ಮ ಚಿತ್ರ
ಕಪಟ ನಾಟಕ ಪಾತ್ರಧಾರಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಉಳಿದ ಹಾಡುಗಳನ್ನೂ ಬೇರೆ ಬೇರೆ ಎಫ್ಎಂ ರೇಡಿಯೋಗಳಲ್ಲಿ ವಿನೂತನವಾಗಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಚಿತ್ರದ ಹಾಡುಗಳನ್ನು ಕೇಳಿ ಖುಷಿ ಪಟ್ಟ ರಿಷಿರವರು, ಸಂಗೀತದ ಬಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನರು ಗುನುಗುನಿಸುವಂತಹ ಸಂಗೀತ ಮತ್ತು ಸಾಹಿತ್ಯ ಹಾಡಿನಲ್ಲಿದೆ, ಇತ್ತೀಚಿಗೆ ಇದೊಂದು ಅಪರೂಪದ ಸಮ್ಮಿಶ್ರಣ ಎಂದು ಹೇಳಿದರು. ಚಿತ್ರದ ಟ್ರೈಲರ್ ನೋಡಿ, ಇದು ಆಪರೇಷನ್ ಅಲಮೇಲಮ್ಮ ಚಿತ್ರದ ಮುಂದಿನ ಭಾಗದಂತಿದೆ, ಕುತೂಹಲ ಹೆಚ್ಚಿಸುವಂತಹ ಚಿತ್ರ ಇದಾಗಿದೆ ಎಂದರು.
ಚಿತ್ರದ ಸಂಗೀತ ನಿರ್ದೇಶಕ ಆದಿಲ್ ನದಾಫ್ ಮಾತನಾಡಿ, ಹಾಡಿನ ಸಂಗೀತ ಸಂಯೋಜನೆ ಮತ್ತು ನಿರ್ದೇಶಕರ ಸಂಗೀತ ಜ್ಞಾನ ತಮ್ಮ ಕೆಲಸಕ್ಕೆ ಸಹಾಯವಾದ ಬಗ್ಗೆ ಹೇಳಿದರು. ಲೈವ್ ಇನ್ಸ್ಟ್ರುಮೆಂಟ್ಸ್ ಬಳಸಿ, ಕೇರಳ, ಚೆನ್ನೈ ಮತ್ತು ಲಾಸ್ ಏಂಜಲೀಸ್ಗಳಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಿರುವ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಹಾಡಿನ ಉಗಮ ಮತ್ತು ಸ್ವರ ಸಂಯೋಜನೆಯ ನಮ್ಮ ನಿರೀಕ್ಷೆಯಂತೆ ಅತ್ಯುತ್ತಮವಾಗಿ ಹಾಡು ಮೂಡಿಬಂದಿದೆ ಎಂದು ಸಿನಿಮಾ ನಿರ್ದೇಶಕ ಕ್ರಿಶ್ ಹೇಳಿದರು.