‘ಕಪಟ ನಾಟಕ ಪಾತ್ರಧಾರಿ’ ಸಿನಿಮಾದ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ‘ಗರುಡ ಕ್ರಿಯೇಷನ್‘ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ವೇಣು ಹಸ್ರಾಲಿ ರಚನೆಯ ಹರಿಚರಣ್ ಹಾಡಿರುವ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ‘ ಲಿರಿಕಲ್ ವಿಡಿಯೋ ಬಹುತೇಕ ಎಲ್ಲರ ಮೆಚ್ಚುಗೆ ಗಳಿಸಿದೆ. ಆಗಸ್ಟ್ನಲ್ಲಿ ನಟ ರಿಷಿ ಈ ಹಾಡನ್ನು ಬಿಡುಗಡೆ ಮಾಡಿದ್ದರು. ಈ ತಿಂಗಳ ಕೊನೆಯಲ್ಲಿ ಸಿನಿಮಾ ಧ್ವನಿಸುರಳಿ ಕೂಡಾ ಬಿಡುಗಡೆಯಾಗಲಿದೆ.
‘ಕಪಟ ನಾಟಕ ಪಾತ್ರಧಾರಿ‘ ಸಿನಿಮಾದ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ - ಸಿನಿಮಾ ಧ್ವನಿಸುರಳಿ
ಸೋಷಿಯಲ್ ಮೀಡಿಯಾ ಹೆಚ್ಚು ಬಳಕೆಗೆ ಬಂದಾಗಿನಿಂದ ಸಿನಿಮಾಗಳ ಪ್ರಮೋಷನ್ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಜರುಗುತ್ತಿರುವುದು ಸಾಮಾನ್ಯ. ಮೊದಲ ಪ್ರಚಾರ ಹಾಗೂ ಪ್ರೇಕ್ಷಕರ ನಾಡಿ ಮಿಡಿತ ದೊರೆಯುತ್ತಿರುವುದು ಈ ಸೋಷಿಯಲ್ ಮೀಡಿಯಾದಲ್ಲೇ.
ಈ ಚಿತ್ರದ ತಂತ್ರಜ್ಞರ ಪರಿಚಯವನ್ನು ಅವರವರ ಫೇಸ್ ಬುಕ್ ಪೇಜ್ ಮೂಲಕ ಮಾಡಲಾಗಿದೆ ಎಂದು ನಿರ್ದೇಶಕ ಕ್ರಿಶ್ ತಿಳಿಸಿದ್ದಾರೆ. ಚಿತ್ರಕ್ಕೆ ಕ್ರಿಶ್ ಅವರೇ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅದಿಲ್ ನದಾಫ್ ಸಂಗೀತ ನೀಡಿದ್ದರೆ ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರಿ ಚರಣ್, ಸಿದ್ದಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಚಿತ್ರಕ್ಕೆ ಜಂಟಿಯಾಗಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ, ನವೀನ್, ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.