ಕನ್ನಡಿಗರಾದ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸುವ ಮೂಲಕ ಖ್ಯಾತಿ ಪಡೆದವರು. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇವರ ಈ ಸಾಧನೆಗಾಗಿ ಜಿ.ಆರ್. ಗೋಪಿನಾಥ್ ಕುರಿತಾಗಿ ಅನೇಕ ಪುಸ್ತಕಗಳು ಕೂಡಾ ಬಿಡುಗಡೆ ಆಗಿವೆ.
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ತಮಿಳಿನಲ್ಲಿ ಕೂಡಾ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಕುರಿತಾದ ಸಿನಿಮಾ ತಯಾರಾಗಿದ್ದು ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತಕ್ಕೆ ವ್ಯಾಪಾರ ಆಗಿದೆ. ಚಿತ್ರದಲ್ಲಿ ತಮಿಳು ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ 'ಸೂರರೈ ಪೊಟ್ರು' ಎಂದು ಹೆಸರಿಡಲಾಗಿದೆ. ಅಕ್ಟೋಬರ್ 30 ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ತಮಿಳಿನಿಂದ ಕನ್ನಡ, ತೆಲುಗು ಸೇರಿ ಇತರ ಭಾಷೆಗಳಲ್ಲೂ ಈ ಸಿನಿಮಾ ಡಬ್ ಆಗಲಿದೆ.
ಅಮೆಜಾನ್ ಪ್ರೈಂ 60 ಕೋಟಿ ರೂಪಾಯಿ ನೀಡಿ ಈ ಚಿತ್ರದ ಹಕ್ಕು ಪಡೆದಿದೆ ಎನ್ನಲಾಗಿದೆ. ಚಿತ್ರವನ್ನು ಗುಣಿತ್ ಮೊಂಗಾ ಹಾಗೂ ಸೂರ್ಯ ಜೊತೆ ಸೇರಿ ನಿರ್ಮಿಸಿದ್ದು ಈ 60 ಕೋಟಿ ರೂಪಾಯಿ ಹಣದಲ್ಲಿ 5 ಕೋಟಿಯನ್ನು ಕೊರೊನಾದಿಂದ ಕಷ್ಟಕ್ಕೆ ಒಳಗಾಗಿರುವ ಸಿನಿಕಾರ್ಮಿಕರಿಗೆ ನೀಡಲಾಗುವುದು ಎಂದು ಸೂರ್ಯ ಘೋಷಿಸಿದ್ದಾರೆ.
ಇದರೊಂದಿಗೆ ಈ ಚಿತ್ರದ ಹಕ್ಕು ಪಡೆಯಲು ವಿಜಯ್ ಟಿವಿ ಕೂಡಾ 20 ಕೋಟಿ ನೀಡಿದೆ ಎನ್ನಲಾಗುತ್ತಿದೆ. ಹಿಂದಿ ಡಬ್ಬಿಂಗ್ ರೈಟ್ಸ್ಗೆ ಕೂಡಾ ಮಾತುಕತೆ ನಡೆದಿದ್ದು 15 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಲಾಭ ಮಾಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
'ಸೂರರೈ ಪೊಟ್ರು' ಚಿತ್ರವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದಾರೆ. ಶಿಖ್ಯ ಎಂಟರ್ಟೈನೆಂಟ್ ಹಾಗೂ , 2 ಡಿ ಎಂಟರ್ಟೈನೆಂಟ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಿದೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸೂರ್ಯ ಜೊತೆ ನಾಯಕಿ ಆಗಿ ಅಪರ್ಣ ಬಾಲಮುರಳಿ ನಟಿಸಿದ್ದಾರೆ ಇವರೊಂದಿಗೆ ಮೋಹನ್ ಬಾಬು, ಪರೇಷ್ ರಾವಲ್, ಜಾಕಿ ಶ್ರಾಫ್, ಊರ್ವಶಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.