ನವರಸ ನಾಯಕ ಜಗ್ಗೇಶ್ ಅಭಿನಯದ ಹ್ಯೂಮರಸ್ ತೋತಾಪುರಿ ಚಿತ್ರ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದೆ ಎಂಬ ಮಾತು ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು. ಈಗ ಅದು ಪಕ್ಕಾ ಆಗಿದೆ.
2 ಸೀಕ್ವೆಲ್ನಲ್ಲಿ ಬರಲಿದೆ ಜಗ್ಗೇಶ್ ತೋತಾಪುರಿ ಸಿನಿಮಾ - ತೋತಾಪುರಿ ಚಿತ್ರ
ನೀರ್ದೋಸೆ ನಂತರ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಅವರ ಕಾಂಬಿನೇಷನ್ನ ತೋತಾಪುರಿ ಸಿನಿಮಾ ಎರಡು ಭಾಗಗಲ್ಲಿ ತೆರೆಗೆ ಬರಲಿದೆ.
ನಿರ್ದೇಶಕ ವಿಜಯ ಪ್ರಸಾದ್ ತೋತಾಪುರಿ ಸಿನಿಮಾ ಎರಡು ಸೀಕ್ವೆಲ್ ರೂಪದಲ್ಲಿ ಬರಲಿದೆ ಎಂದಿದ್ದಾರೆ. ನಿನ್ನೆ ತಮ್ಮ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಅವರು, ತೋತಾಪುರಿ ಚಿತ್ರವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲು ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದೇವೆ ಎಂದರು.
ಈಗಾಗಲೇ ತೋತಾಪುರಿ ಚಿತ್ರದ ಎರಡು ಭಾಗಗಳ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ದೀಪಾವಳಿ ವೇಳೆಗೆ ಟ್ರೇಲರ್ ಹಾಗೂ ಡಿಸೆಂಬರ್ನಲ್ಲಿ ಪಾರ್ಟ್-1 ಬಿಡುಗಡೆಯಾಗಲಿದೆ. ಇದಾದ ಆರು ವಾರಗಳ ನಂತರ ಪಾರ್ಟ್ 2 ಬಿಡುಗಡೆ ಮಾಡಲು ಈಗಾಗಲೇ ನಾವು ಪ್ಲಾನ್ ಮಾಡಿಕೊಂಡಿದ್ದೇವೆ. ಪ್ರಿಕ್ವೆಲ್ ಹಾಗೂ ಸೀಕ್ವೆಲ್ ಚಿತ್ರಗಳು ಎರಡು ಗಂಟೆಗೂ ಹೆಚ್ಚಿನ ಅವಧಿಯ ಹೊಂದಿವೆ ಎಂದರು ನಿರ್ದೇಶಕ ವಿಜಯ ಪ್ರಸಾದ್.