ಕರ್ನಾಟಕ

karnataka

ETV Bharat / sitara

'ದಿ ವಿಲನ್'​ ನಟಿಗೆ ಮದುವೆ-ಮಗು ಒಟ್ಟೊಟ್ಟಿಗೆ... ರೆಡ್​ ಕಾರ್ಪೆಟ್​ ಮೇಲೆ ಗರ್ಭಿಣಿ ಆ್ಯಮಿ ಕ್ಯಾಟ್​ ವಾಕ್​ - ಮದುವೆ

ನಟಿ ಆ್ಯಮಿ ಜಾಕ್ಸನ್ ಪ್ರಗ್ನೆನ್ಸಿ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಮದುವೆ ಮುಂಚೆಯೇ ಮಗು ಪಡೆಯುತ್ತಿರುವ ಖುಷಿಯಲ್ಲಿರುವ ಆ್ಯಮಿ, ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 1, 2019, 9:12 PM IST

ಬಾಲಿವುಡ್ ನಟಿ ಆ್ಯಮಿ ಜಾಕ್ಸನ್​ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಮದುವೆ ಸಂಭ್ರಮ. ಮತ್ತೊಂದೆಡೆ ತಾಯಿ ಆಗುತ್ತಿರುವ ಸಂತೋಷ.

ಈ ಬ್ರಿಟನ್ ಬ್ಯೂಟಿ ಆ್ಯಮಿ ಜಾಕ್ಸ್​​ನ್​ ಮದುವೆ ಮುಂಚೆಯೇ ಅಮ್ಮ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಅವರೇ ಈ ವಿಚಾರವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲರೆದರು ಹೇಳಿಕೊಂಡಿದ್ದರು. ಇದರಲ್ಲಿ ಬಚ್ಚಿಡುವುದೇನಿದೆ ಹೇಳಿ? ಎಲ್ಲರೂ ಮದುವೆ ಬಳಿಕ ಮಗು ಪಡೆಯುತ್ತಾರೆ. ಆದರೆ, ನಾವು ಮದುವೆ ಮುನ್ನ ಪಡೆಯುತ್ತಿದ್ದೇವೆ ಅಷ್ಟೇ ಎಂದಿದ್ದರು.

ಆ್ಯಮಿ ಕಳೆದ ವರ್ಷ ತಮ್ಮ ಬಾಯ್​ಫ್ರೆಂಡ್​ ಜಾರ್ಜ್ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು, ನಾನು ಆಲ್ ​ರೆಡಿ ಎಂಗೇಜ್ ಅಂತಾ ಪರೋಕ್ಷವಾಗಿ ಹೇಳಿಕೊಂಡಿದ್ದರು. ಕೆಲವೊಂದು ಪ್ರೈವೇಟ್ ಪಾರ್ಟಿ, ಪಬ್​ಗಳಲ್ಲಿ ಕಾಣಿಸಿಕೊಂಡು ತಮ್ಮ ರಿಲೇಷನ್​ಶಿಪ್​ನ್ನು ಹಚ್ಚು ಹಸಿರಾಗಿಸಿಕೊಂಡಿದ್ದರು. ಕಳೆದ ತಿಂಗಳು ಇನ್​ಸ್ಟಾಗ್ರಾಂನಲ್ಲಿ ತಮ್ಮ ಪ್ರಗ್ನೆನ್ಸಿ ರಿವೀಲ್ ಮಾಡಿದ್ದ ಈ ನಟಿ, ಜಾರ್ಜ್​ ಜತೆಗಿನ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ರು.

ಸದ್ಯ ತಾಯ್ತನದ ಪೂರ್ವದ ದಿನಗಳ ಪ್ರತಿ ಕ್ಷಣಗಳನ್ನು ಎಂಜಾಯ್​ ಮಾಡುತ್ತಿರುವ ಆ್ಯಮಿ, ವುಡ್​​ಬಿ ಜತೆ ಸುತ್ತಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಫ್ಯಾಷನ್​ ಶೋವೊಂದರಲ್ಲೂ ಹಾಜರಾಗಿದ್ದರು. ಬಾರ್ಸಿಲೋನಾದಲ್ಲಿ ನಡೆದ ಒನ್​ಓಸಿಯನ್ ಕ್ಲಬ್ ಫ್ಯಾಷನ್ ಶೋನಲ್ಲಿ ತುಂಬು ಗರ್ಭ ಹೊತ್ತುಕೊಂಡೇ ರೆಡ್​ ಕಾರ್ಪೆಟ್​ ಮೇಲೆ ವಾಕ್ ಮಾಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಖುಷಿ ಖುಷಿಯಾಗೇ ಹಂಚಿಕೊಂಡಿದ್ದಾರೆ.

ಇನ್ನು ಆ್ಯಮಿ ಜಾಕ್ಸನ್ ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ದಿ ವಿಲನ್ ಚಿತ್ರಕ್ಕೂ ಆ್ಯಮಿ ನಾಯಕಿಯಾಗಿದ್ದರು. ಇದೇ ಮೇ 5 ಕ್ಕೆ ಲಂಡನ್​ನಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ.

ABOUT THE AUTHOR

...view details