ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​​ವುಡ್​​​ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!! - ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸ್ಟಂಟ್ ಮಾಸ್ಟರ್

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಸಾಹಸ ನಿರ್ದೇಶಕ, ಸ್ಟಂಟ್ ಮಾಸ್ಟರ್​​ ಥ್ರಿಲ್ಲರ್ ಮಂಜು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕನ್ನಡದ ಜಾಕಿಜಾನ್​ಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ನಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಸ್ಯಾಂಡಲ್ ವುಡ್ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!!

By

Published : Nov 24, 2019, 2:34 AM IST

ಬೆಂಗಳೂರ:ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಸಾಹಸ ನಿರ್ದೇಶಕ, ಸ್ಟಂಟ್ ಮಾಸ್ಟರ್​​ ಥ್ರಿಲ್ಲರ್ ಮಂಜು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕನ್ನಡದ ಜಾಕಿಜಾನ್​ಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ನಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಸ್ಯಾಂಡಲ್ ವುಡ್ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!!

ಜೀವಮಾನ ಸಾಧನೆಗಾಗಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. 1990ರ ದಶಕದಿಂದ ಸ್ಟಂಟ್ ಮಾಸ್ಟರ್ ಆಗಿ, ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ದುಡಿಯುತ್ತಿರುವ ಮಂಜು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಚೈತ್ರದ ಪ್ರೇಮಾಂಜಲಿ, ಕಾಲೇಜ್ ಹೀರೋ, ಲಾಕಪ್‌ ಡೇತ್, ಶ್, ಓಂ, ಪುಟ್ನಂಜ, ‌ಪೊಲೀಸ್ ಸ್ಟೋರಿ ಹೀಗೆ ಸುಮಾರು 350ಕ್ಕೂ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ದುಡಿದಿರುವ ಶ್ರಮಕ್ಕೆ ಈಗ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಮಂಜುಗೆ ಸಂತಸ ತಂದಿದೆ.

ABOUT THE AUTHOR

...view details