ಕರ್ನಾಟಕ

karnataka

ETV Bharat / sitara

ಕೊರೊನಾ ಎಫೆಕ್ಟ್​ ನಂತರ ಇಳಿಯಲಿದೆಯೇ ಕೋಟಿ ಕೋಟಿ ಪಡೆಯುವ ಕನ್ನಡದ ಸ್ಟಾರ್​ ನಟರ ಸಂಭಾವನೆ? - ಸ್ಯಾಂಡಲ್​ವುಡ್​ ನಟ ಸಂಭಾವನೆ

ಕನ್ನಡ ಚಿತ್ರರಂಗದಲ್ಲೂ ಕೋಟಿ ಕೋಟಿ ಬಜೆಟ್ ಸಿನಿಮಾಗಳ ನಿರ್ಮಾಣದ ಟ್ರೆಂಡ್ ಶುರುವಾಗಿದೆ. ಹಾಗದ್ರೆ ಯಾವ ಯಾವ ನಟರ ಸಂಭಾವನೆಯ ಸೀಕ್ರೆಟ್ ಎಷ್ಟು ಎಂಬ ಸ್ಟೋರಿ ಇಲ್ಲಿದೆ.

kannada stars remuneration
ಸ್ಯಾಂಡಲ್​ವುಡ್​ ನಟರ ಸಂಭಾವನೆಗಳು ಎಷ್ಟೆಷ್ಟು : ಯಶ್​​ ಸಂಭಾವನೆ ಗೊತ್ತಾ?

By

Published : Apr 21, 2020, 3:09 PM IST

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳು ಇದೀಗ ತನ್ನದೇ ಆದ ಛಾಪು ಮೂಡಿಸಿವೆ. ಇತ್ತೀಚೆಗೆ ರಿಲೀಸ್​ ಆದ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪನ್ನು ಪಸರಿಸಿವೆ.

ಅದೊಂದು ಕಾಲವಿತ್ತು. ಕನ್ನಡದಲ್ಲಿ ಕೋಟಿ ಬಜೆಟ್‍ನ ಚಿತ್ರಗಳು ಸೆಟ್ಟೇರುತ್ತಿವೆ ಎಂದರೆ, ಅದೇ ದೊಡ್ಡ ವಿಷ್ಯ ಎಂಬಂತೆ ಸುದ್ದಿಯಾಗುತ್ತಿತ್ತು. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ ಎಂಬ ವಾದವೂ ಇತ್ತು. ಆದ್ರೆ ಈಗ ಕಾಲ ಬದಲಾಗಿದೆ.

ಕನ್ನಡ ಚಿತ್ರರಂಗದಲ್ಲೂ ಕೋಟಿ ಕೋಟಿ ಬಜೆಟ್ ಸಿನಿಮಾಗಳ ನಿರ್ಮಾಣದ ಟ್ರೆಂಡ್ ಶುರುವಾಗಿದೆ. ಬರೀ ಕನ್ನಡ ಭಾಷೆಗೆ ಸೀಮಿತವಾಗಿದ್ದ ನಮ್ಮ ಭಾಷೆಯ ಚಿತ್ರಗಳು, ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಸಂಭಾವನೆ ಕೂಡ ಆಕಾಶದ ಎತ್ತರದಷ್ಟೇ ಏರಿಕೆಯಾಗಿದೆ. ಹಾಗದ್ರೆ ಯಾವ ಯಾವ ನಟರ ಸಂಭಾವನೆಯ ಸೀಕ್ರೆಟ್ ಸ್ಟೋರಿ ಇಲ್ಲಿದೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್​​​ವುಡ್​ನಲ್ಲಿ, ಸ್ಟಾರ್ ಪಟ್ಟ ಅಲಂಕರಿಸಿದ ನಟ ರಕ್ಷಿತ್ ಶೆಟ್ಟಿ ಈ ಸಿನಿಮಾ ಹಿಟ್ ಆಗುವುದಕ್ಕಿಂತ ಮುಂಚೆ, ಸಿಂಪಲ್ ಸ್ಟಾರ್ ರಕ್ಷಿತ್ ಸಂಭಾವನೆ ಒಂದುವರೆ ಕೋಟಿ ಇತ್ತು. ಕಿರಿಕ್ ಪಾರ್ಟಿ ಹಿಟ್ ಆದ ನಂತರ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಪಡೆದ ಸಂಭಾವನೆ 3 ಕೋಟಿ ರೂಪಾಯಿ.

ರಕ್ಷಿತ್​

ಕಾಮಿಡಿ ಜೊತೆಗೆ ಆಕ್ಷನ್ ಹೀರೋ ಆಗಿ ಗಮನ ಸೆಳೆದ ನಟ ಗೋಲ್ಡನ್ ಸ್ಟಾರ್ ಗಣೇಶ್, ಚಮಕ್ ಸಿನಿಮಾ ಹಿಟ್ ಆದಮೇಲೆ ಗಣಿ ಸಂಭಾವನೆ ಕೊಂಚ ಜಾಸ್ತಿ ಆಯಿತು. ಗೀತಾ ಚಿತ್ರ ಡಿಜಿಟಲ್ ರೈಟ್ಸ್, ಟಿವಿ ರೈಟ್ಸ್​​​ಗೆ ಬೇಡಿಕೆ ಇರೋ ಕಾರಣ, ಗಣೇಶ್ ಸಂಭಾವನೆ ಮೂರುವರೆ ಕೋಟಿಯಂತೆ. ಸದ್ಯ ಗಾಳಿಪಟ 2 ಚಿತ್ರಕ್ಕೆ ಗಣಿ ಮೂರುವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಶಿವಣ್ಣ

ಐ ಲವ್ ಯೂ ಚಿತ್ರದ ಮೂಲಕ ಸ್ಯಾಂಡಲ್​​ ವುಡ್​​ಗೆ ಗುಡ್ ಕಮ್ ಬ್ಯಾಕ್ ಮಾಡಿರುವ ಉಪೇಂದ್ರ, ಈ ಸಿನಿಮಾಗೆ ಒಂದುವರೆ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ರಂತೆ..ಈ ಚಿತ್ರ ಸೂಪರ್ ಹಿಟ್ ನಂತ್ರ ಕಬ್ಜ ಚಿತ್ರಕ್ಕೆ 3 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರಂತೆ.

ಶಿವಣ್ಣ

ಇನ್ನು ಸ್ಯಾಂಡಲ್​ವುಡ್​​ನಲ್ಲಿ ವಯಸ್ಸು 56 ಆದ್ರೂ ಕೂಡ, ವರ್ಷಕ್ಕೆ ಮೂರು ಸಿನಿಮಾಗಳನ್ನ ಮಾಡುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಳೆದ ವರ್ಷ ರಿಲೀಸ್ ಆದ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಟಗರು. ಈ ಚಿತ್ರದ ನಂತರ ಸೆಂಚುರಿ ಸ್ಟಾರ್ ಸಂಭಾವನೆ ಕೊಂಚ ಜಾಸ್ತಿ ಆಗಿದೆ. ಸದ್ಯ ಭಜರಂಗಿ 2 ಹಾಗು ಆರ್ ಡಿ ಎಕ್ಸ್ ಚಿತ್ರಕ್ಕೆ ಶಿವರಾಜ್ ಮೂರುವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಧ್ರುವಾ

ಕನ್ನಡದಲ್ಲಿ ಕೇವಲ ಮೂರು ಸಿನಿಮಾ ಮಾಡಿದ್ರೂ, ಧ್ರುವ ಸರ್ಜಾ ಸಂಭಾವನೆ ಕೋಟಿಯಷ್ಟೇ ಇದೆ. ಮೊದಲು ಧ್ರುವಾ ಒಂದು ಸಿನಿಮಾ 90 ಲಕ್ಷದಿಂದ 1 ಕೋಟಿ ರೂಪಾಯಿ ಪಡೆಯತ್ತಿದ್ರು. ಈಗ ಪೊಗರು ಚಿತ್ರಕ್ಕೆ ಧ್ರುವ ಸರ್ಜಾ ಕೂಡ 3 ರಿಂದ 4 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ..

ಪುನೀತ್​ ರಾಜ್​ ಕುಮಾರ್​

ಇನ್ನು ಸ್ಟಾರ್ ನಟರಾದ ಪುನೀತ್ ರಾಜ್‍ಕುಮಾರ್ , ದರ್ಶನ್ ಹಾಗು ಸುದೀಪ್ ಸಂಭಾವನೆ ಮೊದಲು 6ರಿಂದ 7 ಕೋಟಿ ರೂಪಾಯಿ ಇತ್ತು..ಈಗ ಟಿವಿ ರೈಟ್ಸ್, ಡಿಜಿಟಲ್ ಪ್ಲಾಟ್ ಫಾರಂ, ಡಬ್ಬಿಂಗ್ ರೈಟ್ಸ್ ನಲ್ಲಿ ಸಿಕ್ಕಾಪಟ್ಟೇ ಬೇಡಿಕೆ ಇರುವ ಕಾರಣ, ಈ ಮೂರು ಜನ ಸ್ಟಾರ್ ನಟರು ಬರೋಬ್ಬರಿ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅಂತಾ ಗಾಂಧಿನಗರದ ಸಿನಿಮಾ ಪಂಡಿತರ ಮಾತು.ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್. ಹೌದು ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಯಶ್ ಸಂಭಾವನೆ ಆಕಾಶದ ಮಟ್ಟಕ್ಕೆ ಏರಿದೆ. ಯಶ್ ಆಪ್ತರ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಯಶ್ ಪಡೆದಿರುವ ಸಂಭಾವನೆ ಬರೋಬ್ಬರಿ 25 ಕೋಟಿ.

ದರ್ಶನ್
ಯಶ್
ಸುದೀಪ್

ಹೀಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಕನ್ನಡ ನಟರು, ಇನ್ಮುಂದೆ ಇಷ್ಟು ಕೋಟಿ ರೂಪಾಯಿ ಸಂಭಾವನೆ ಪಡೆಯೋದು ಡೌಟ್. ಯಾಕೆಂದರೆ ಈ ಕೊರೊನಾದಿಂದಾಗಿ ಬಾಲಿವುಡ್, ಟಾಲಿವುಡ್, ಕಾಲಿವುಡ್​​ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ನಟರು, ರೆಮ್ಯುನಿರೇಷನ್ ಈಗ ಕಡಿಮೆ ಮಾಡಲಾಗಿದೆಯಂತೆ. ಇದರ ಎಫೆಕ್ಟ್ ಕನ್ನಡ ಸ್ಟಾರ್ ನಟರ ಮೇಲೆ ಆಗೋದ್ರಲ್ಲಿ ಎರಡು ಮಾತಿಲ್ಲ.

ABOUT THE AUTHOR

...view details