ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ಶ್ರೀಗಳ ನಿಧನ ಹಿನ್ನೆಲೆ ಟ್ವೀಟ್ ಮಾಡಿದ್ದು, ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಠ ಸಂತ ಶ್ರೀ ವಿಶ್ವೇಶ ತೀರ್ಥರು. ನಿಮ್ಮ ಬಳಿ ಅನೇಕ ಬಾರಿ ಆಶೀರ್ವಾದ ಪಡೆದ ನಾನೇ ಧನ್ಯ ಅನ್ನಿಸಿತು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಪೇಜಾವರ ಶ್ರೀಗಳ ನಿಧನ: ಸ್ಯಾಂಡಲ್ವುಡ್ ನಟರಿಂದ ಸಂತಾಪ - ಪೇಜಾವರ ಶ್ರೀಗಳ ನಿಧನ
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ.

ಪೇಜಾವರ ವಿಶ್ವೇಶ್ವ ತೀರ್ಥ ಸ್ವಾಮೀಜಿಗಳು
ಇನ್ನು, ಶ್ರೀಗಳ ನಿಧನ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.
ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಉಪೇಂದ್ರ ಪೇಜಾವರ ಶ್ರೀಗಳು ಎಂದೆಂದೂ ಅಮರ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.