ಭಾರತಿಯ ಸಿನಿರಂಗಕ್ಕೆ ನಿನ್ನೆ ಕರಾಳ ಬುಧವಾರ ಎಂದರೆ ತಪ್ಪಲ್ಲ. ಬಾಲಿವುಡ್‌ನ ಹೆಸರಾಂತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ನಿನ್ನೆ ಕೊನೆಯುಸಿರೆಳೆದಿದ್ದರು.
ಕನ್ನಡತಿ ಧಾರಾವಾಹಿಯ ಭುವಿ ಪಾತ್ರಧಾರಿ ರಂಜನಿ ರಾಘವನ್ ಅವರು, ನನಗೆ ಸ್ಫೂರ್ತಿ ಆಗಿದ್ದ ವ್ಯಕ್ತಿಗಳ ಪೈಕಿ ಇರ್ಫಾನ್ ಖಾನ್ ಕೂಡಾ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಚಂದನ್ ಆಚಾರ್ ಅವರು ಇರ್ಫಾನ್ ಖಾನ್ ಅಗಲಿರುವ ಸುದ್ದಿ ಕೇಳಲು ನಿಜಕ್ಕೂ ತುಂಬಾನೇ ಬೇಸರವಾಗುತ್ತಿದೆ. ಈ ನೋವು ಸಹಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಯುವ ಸಂಗೀತ ಮಾಂತ್ರಿಕ, ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್, ಸರ್, ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಪಾತ್ರಧಾರಿ ರಕ್ಷ್ ಇರ್ಫಾನ್ ಖಾನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.