'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತಂಡ ಇದೀಗ ಹೊಸ ಸಿನಿಮಾ ‘ಸಪ್ತ ಸಾಗರದಾಚೆಯೆಲ್ಲೋ...’ ಮಾಡುತ್ತಿರುವ ವಿಚಾರ ಈಗೇನು ರಹಸ್ಯವಾಗಿ ಉಳಿದಿಲ್ಲ. ಈ ಹಿಂದೆಯೇ ಸಿನಿಮಾ ಬಗ್ಗೆ ಮಾಹಿತಿಗಳು ಹರಿದಾಡಿದ್ದು, ಚಿತ್ರದಲ್ಲಿ ರಕ್ಷಿತ್ ಬಣ್ಣ ಹಚ್ಚುತ್ತಾರೆ ಎಂಬುದು ಕೂಡ ಗೊತ್ತಾಗಿದೆ.
ಹೌದು.. ಹೇಮಂತ್ ಎಂ. ರಾವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ 2020ರ ಮಾರ್ಚ್ನಿಂದಲೇ ಚರ್ಚೆಯಲ್ಲಿತ್ತು. ಆದ್ರೆ ಆಗ ಕೊರೊನಾ ಹಾವಳಿ ಇದ್ದಿದ್ದರಿಂದ ಸಿನಿಮಾದ ಯಾವುದೇ ಕಾರ್ಯಗಳು ನಡೆದಿರಲಿಲ್ಲ. ಇದೀಗ ಕೊರೊನಾ ಕೊಂಚ ಕಡಿಮೆಯಾಗಿರುವುದರಿಂದ ಚಿತ್ರತಂಡ ಕೆಲಸ ಶುರು ಮಾಡಿದೆ.