ಅಂದು ‘ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದ ಪೂಜಾ ಗಾಂಧಿ, ಇದೀಗ ಮೊಟ್ಟ ಮೊದಲ ಬಾರಿಗೆ ಸಾಹಸಭರಿತ 'ಸಂಹಾರಿಣಿ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಕನ್ನಡದ 'ಸಂಹಾರಿಣಿ'ಯಲ್ಲಿ ಬಾಲಿವುಡ್ ಖಳನಟರ ಪಾರುಪತ್ಯ - undefined
ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್ನ ಫೇಮಸ್ ಖಳ ನಟರಾದ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ವಿಲನ್ ರೋಲ್ ಮಾಡಿದ್ದಾರೆ.
ಪೂಜಾ ಗಾಂಧಿ
'ಸಂಹಾರಿಣಿ'ಗೆ ಹಿಂದಿ ಸಿನಿಮಾಗಳ ನಿರ್ದೇಶಕ ಕೆ.ಜವಾಹರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. '2ಎಂ' ಸಿನಿಮಾಸ್ ಬ್ಯಾನ್ನರ್ನಡಿ ಕೆ.ವಿ.ಶಬರೀಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಜನಪ್ರಿಯ ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್ನ ಫೇಮಸ್ ಖಳ ನಟರಾದ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ವಿಲನ್ ರೋಲ್ ಮಾಡಿದ್ದಾರೆ. ಸಚಿನ್ ಹಾಗೂ ಅರುಣ್ ಸಹ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ.
ಮಾಸ್ ಮಾಧ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ರಾಜೇಶ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.