ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾವನ್ನು ನೋಡಿ ಬಂದಿರುವ ಅಭಿಮಾನಿಗಳು ಫುಲ್ ಅಂಕ ನೀಡಿದ್ದಾರೆ. ಆದರೆ, ಈ ಸಂತೋಷದ ನಡುವೆ ಪೈರಸಿ ಎಂಬ ಭೂತವೊಂದು ವಕ್ಕರಿಸಿದೆ.
ಸಿನಿಮಾ ರಂಗದಲ್ಲಿ ಪೈರಸಿ ಎಂಬ ಭೂತ ಹಾಸುಹೊಕ್ಕಾಗಿದೆ. ಯಾವುದೇ ದೊಡ್ಡ ಸಿನಿಮಾಗಳು ಬೆಳಗ್ಗೆ ರಿಲೀಸ್ ಆಗ್ತಾ ಇದ್ದಂತೆ ಸಂಜೆಯೊಳಗೆ ಲೀಕ್ ಆಗಿ ಸಿನಿಮಾ ತಂಡಕ್ಕೆ ಶಾಕ್ ನೀಡಿರುತ್ತೆ. ಇದೇ ರೀತಿ ಕೋಟಿ ಕೋಟಿ ಬಂಡವಾಳ ಹೂಡಿ ನಿರ್ಮಾಣ ಮಾಡಲಾಗಿದ್ದ ರಾಬರ್ಟ್ ಸಿನಿಮಾ ನಿನ್ನೆಯಷ್ಟೇ 1400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡು ಉತ್ತಮ ಪ್ರದರ್ಶನ ನೀಡಿತ್ತು. ಆದರೀಗ ಕೆಲವು ಕಿಡಿಗೇಡಿಗಳು ಈ ಸಿನಿಮಾವನ್ನು ಮೊಬೈಲ್ನಲ್ಲಿ ಶೂಟ್ ಮಾಡಿ, ಅದನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಚಿತ್ರತಂಡದ ಗಮನಕ್ಕೆ ಬಂದಿದ್ದು, ಇಂತವರ ವಿರುದ್ಧ ಈಗಾಗಲೇ ಸೈಬರ್ ಕ್ರೈಮ್ ಮೊರೆ ಹೋಗಿದೆ. ಅಚ್ಚರಿಯೆಂದರೆ ಸುಮಾರು 3000 ಪೈರಸಿ ಲಿಂಕ್ಗಳು ಈವರೆಗೆ ಪತ್ತೆಯಾಗಿವೆ.