ಕರ್ನಾಟಕ

karnataka

ETV Bharat / sitara

ಪವನ್ ಒಡೆಯರ್ ನಿರ್ದೇಶನದ ರೇಮೋ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ - ಇಶಾನ್

ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಮೋಷನ್ ಹೊಂದಿರುವ ರೇಮೋ ಸಿನಿಮಾ ಚಿತ್ರದ ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿದೆ. ಇಶಾನ್, ಆಶಿಕಾ ರಂಗನಾಥ್ ಅಲ್ಲದೇ ಶರತ್ ಕುಮಾರ್, ‌ಮಧುಬಾಲ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ..

ರೇಮೋ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್
ರೇಮೋ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್

By

Published : Nov 17, 2021, 6:32 PM IST

"ರೇಮೋ" ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಸದ್ದು ಮಾಡ್ತಿರೋ ಸಿನಿಮಾ. ನಟಸಾರ್ವಭೌಮ ಸಿನಿಮಾ ಬಳಿಕ ಪವನ್ ಒಡೆಯರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ರೋಗ್ ಸಿನಿಮಾ ಖ್ಯಾತಿಯ ಇಶಾನ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಚಿತ್ರೀಕರಣ ಮಾಡುತ್ತಿದ್ದ ರೇಮೋ ಸಿನಿಮಾಗೆ ಚಿತ್ರತಂಡ ಕುಂಬಳಕಾಯಿ ಒಡೆಯುವ ಮೂಲಕ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದೆ.

ನಟ ಇಶಾನ್ ಈ ಚಿತ್ರದಲ್ಲಿ ರಾಕ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ಮೇಕ್ ಓವರ್ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಡಬಲ್ ಡೆಕ್ಕರ್ ಗಿಟಾರ್ ಇಶಾನ್ ಕಲಿತುಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಶಾನ್​​ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.

ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಮೋಷನ್ ಹೊಂದಿರುವ ರೇಮೋ ಸಿನಿಮಾ ಚಿತ್ರದ ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿದೆ. ಇಶಾನ್, ಆಶಿಕಾ ರಂಗನಾಥ್ ಅಲ್ಲದೇ ಶರತ್ ಕುಮಾರ್, ‌ಮಧುಬಾಲ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಬಿಗ್ ಬಜೆಟ್ ಚಿತ್ರಗಳ‌ ಸರದಾರ ಅಂತಾ ಕರೆಯಿಸಿಕೊಂಡಿರುವ ಸಿ.ಆರ್. ಮನೋಹರ್, ಜೈಆದಿತ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ರೇಮೋ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ಹೊಣೆ ಹೊತ್ತಿದ್ದು, ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಣ ಈ ಚಿತ್ರಕ್ಕಿದೆ.

ಸದ್ಯ ಚಿತ್ರತಂಡ ಫೈನಲ್ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಸಾಕಷ್ಟು ವಿಶೇಷ ವಿಚಾರಗಳಿಂದ ಕೂಡಿರೋ ರೇಮೋ ಇದೇ ಡಿಸೆಂಬರ್‌ನಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆ.

ABOUT THE AUTHOR

...view details