ಕರ್ನಾಟಕ

karnataka

By

Published : Mar 24, 2022, 6:19 PM IST

ETV Bharat / sitara

'ಹೌಸ್​ ಪಾರ್ಟಿ'ಯಲ್ಲಿ ರ್‍ಯಾಪರ್ ALL OK ಜೊತೆಗೆ ಸೊಂಟ ಬಳುಕಿಸಿದ ಅದ್ವಿಕಾ

ಕನ್ನಡದ ರ್‍ಯಾಪರ್ ಅಲೋಕ್​​ ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡು ಹೊರತಂದಿದ್ದಾರೆ. ಈ 'ಹೌಸ್​ ಪಾರ್ಟಿ' ಆಲ್ಬಂ ಹಾಡಿಗೆ ಅವರೇ ಸಂಗೀತ, ಸಾಹಿತ್ಯ, ನಿರ್ದೇಶನ ಹಾಗು ನಿರ್ಮಾಣವನ್ನೂ ಮಾಡಿದ್ದಾರೆ.

ರ್‍ಯಾಪರ್ ALL OK
ರ್‍ಯಾಪರ್ ALL OK

ಸ್ಯಾಂಡಲ್‌ವುಡ್​​​ನಲ್ಲಿ‌ ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್​ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್, ಸಿಂಗರ್​, ಕಂಪೋಸರ್​ ಅಂದರೆ ALL OK ಅಲಿಯಾಸ್​ ಅಲೋಕ್​. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಅವರು ಹೊರತಂದಿದ್ದಾರೆ. ಇದರ ಹೆಸರು 'ಹೌಸ್​ ಪಾರ್ಟಿ'.

ಈ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ ಹಾಗು ನಿರ್ಮಾಣವನ್ನೂ ಮಾಡಿರುವ ಅಲೋಕ್​, ಕೋವಿಡ್​ ಸಮಯದಲ್ಲಿನ ಕಾನ್ಸೆಪ್ಟ್​ವೊಂದರಿಂದ ಪ್ರೇರಣೆ ಪಡೆದು 'ಹೌಸ್​ ಪಾರ್ಟಿ' ಹಾಡನ್ನು ಹೊರತಂದಿದ್ದೇನೆ ಎಂದಿದ್ದಾರೆ​​​.

ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್​ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್​ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ ಎಂದು ಅವರು​ ಬೇಸರ ವ್ಯಕ್ತಪಡಿಸಿದರು.

ಕಿರಿಕ್​ ಶಂಕರ್​ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ, ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 'ಇದು ನನ್ನ ಮೊದಲ ಆಲ್ಬಂ, ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್​ ಬೇರ್‌ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು' ಎನ್ನುತ್ತಾರೆ ಅದ್ವಿಕಾ. ಈ ಆಲ್ಬಂಗೆ ಆಕಾಶ್​ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.

ABOUT THE AUTHOR

...view details