ಕರ್ನಾಟಕ

karnataka

ETV Bharat / sitara

"ಆಮ್ಲೆಟ್"​​ನೊಂದಿಗೆ ಬರ್ತಿದ್ದಾರೆ ಸಂಯುಕ್ತ ಹೊರನಾಡು - kannada cinema

ಸ್ಯಾಂಡಲ್​ವುಡ್​ನಲ್ಲಿ "ಆಮ್ಲೆಟ್"​​ ಅನ್ನೋ ಸಿನಿಮಾ ಬರುತ್ತಿದ್ದು ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಿ.ವಿ.ಶಿವಶಂಕರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಓಂ ಪ್ರಕಾಶ್ ಮತ್ತು ಪ್ರಸನ್ನ ಬಂಡವಾಳ ಹೂಡಿದ್ದಾರೆ.

"ಆಮ್ಲೆಟ್"​​ನೊಂದಿಗೆ ಬರ್ತಿದ್ದಾರೆ ಸಂಯುಕ್ತ ಹೊರನಾಡು

By

Published : Oct 16, 2019, 1:31 PM IST

ಕನ್ನಡದಲ್ಲಿ ಹೊಸ ಹೊಸ ಸಿನಿಮಾಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಅದರಲ್ಲೂ ಇತ್ತೀಚಿನ ಸಿನಿಮಾಗಳ ಹೆಸರು ಕೂಡ ಒಂಚೂರು ವಿಶೇಷತೆಯಿಂದ ಕೂಡಿದ್ದು ಸಿನಿ ಪ್ರಿಯರಿಗೆ ಕುತೂಹಲ ಹೆಚ್ಚಿಸುತ್ತಿವೆ. ಇದೀಗ ಇಂತಹದ್ದೇ ಒಂದು ಸಿನಿಮಾ ಕನ್ನಡದಲ್ಲಿ ರೆಡಿಯಾಗುತ್ತಿದೆ.

ಹೌದು ಸ್ಯಾಂಡಲ್​ವುಡ್​ನಲ್ಲಿ "ಆಮ್ಲೆಟ್"​​ ಅನ್ನೋ ಸಿನಿಮಾ ಬರುತ್ತಿದ್ದು ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ. ಈ ಮೂಲಕ ಸಂಯುಕ್ತ ಸುದ್ದಿಯಲ್ಲಿದ್ದಾರೆ. ಈ ಆಮ್ಲೆಟ್​ ಸಿನಿಮಾವನ್ನು ಸಿ.ವಿ.ಶಿವಶಂಕರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಓಂ ಪ್ರಕಾಶ್ ಮತ್ತು ಪ್ರಸನ್ನ ಬಂಡವಾಳ ಹೂಡಿದ್ದಾರೆ. ಸಿನಿಮಾವನ್ನು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ.

‘ಆಮ್ಲೆಟ್’ ಚಿತ್ರ ಹಾಸ್ಯದ ವಸ್ತುವನ್ನು ಇಟ್ಟುಕೊಂಡು ತೆರೆಯ ಮೇಲೆ ಬರುತ್ತಿರವ ಸಿನಿಮಾವಂತೆ. ಇನ್ನು ಈ ಸಿನಿಮಾಕ್ಕೆ ವಿಷಕ ರಾಮ ಪ್ರಸಾದ್ ಸಂಗೀತ ಬರೆದಿದ್ದು ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆಯಂತೆ. ಸಿ ಜಿ ಜೈದೇವನ್ ಛಾಯಾಗ್ರಹಣ, ಚಂದನ್ ಸಂಕಲನ, ಗುರುರಾಜ ದೇಸಾಯಿ ಸಂಭಾಷಣೆ, ಲಾರೆನ್ಸ್ ಪ್ರೀತಮ್ ಸಹ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.

ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ಜತೆಗೆ ನವೀನ್, ನಿರಂಜನ್ ದೇಶ್​ಪಾಂಡೆ, ಬಿ ದಿ ಸತೀಶ್ ಚಂದ್ರ, ಶೋಭರಾಜ್, ಶರ್ಮಿತ ಗೌಡ ಹಾಗೂ ಇತರರು ಅಭಿನಯಿಸಿದ್ದಾರೆ.

ABOUT THE AUTHOR

...view details