ಕರ್ನಾಟಕ

karnataka

ETV Bharat / sitara

'ನಾನೇ ರಾಜ'ನೆಂದು ಅದೃಷ್ಟ ಪರೀಕ್ಷೆಗಿಳಿದ ಗೋಲ್ಡನ್ ಸ್ಟಾರ್ ಸಹೋದರ - ನಾನೇ ರಾಜ ಸಿನಿಮಾ ಬಿಡುಗಡೆ ದಿನಾಂಕ

ಸ್ಯಾಂಡಲ್​ವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು ಮತ್ತೆ ರಿಪೀಟ್ ಆಗೋದೇ ಒಂದು ಟ್ರೆಂಡ್ ಆಗುತ್ತಿದೆ. 1982ರಲ್ಲಿ ತೆರೆ ಕಂಡ 'ನಾನೇ ರಾಜ' ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಮಿಂಚಿದ್ರು. ಇದೀಗ ಗೋಲ್ಡನ್ ಸ್ಟಾರ್ ಸಹೋದರ ಸೂರಜ್ ಕೃಷ್ಣ ಮತ್ತೆ 'ನಾನೇ ರಾಜ' ಸಿನಿಮಾ ಮೂಲಕ‌ ಅದೃಷ್ಟ ಪರೀಕ್ಷೆಗಳಿದಿದ್ದಾರೆ.

ನಾನೇ ರಾಜ ನಿಸಿಮಾದ ತಂಡದಿಂದ ಸುದ್ದಿಗೋಷ್ಠಿ

By

Published : Nov 25, 2019, 11:00 PM IST

ಸ್ಯಾಂಡಲ್​ವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು ಮತ್ತೆ ರಿಪೀಟ್ ಆಗೋದೇ ಒಂದು ಟ್ರೆಂಡ್ ಆಗುತ್ತಿದೆ. 1982ರಲ್ಲಿ ತೆರೆ ಕಂಡ 'ನಾನೇ ರಾಜ' ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಮಿಂಚಿದ್ರು. ಇದೀಗ ಗೋಲ್ಡನ್ ಸ್ಟಾರ್ ಸಹೋದರ ಸೂರಜ್ ಕೃಷ್ಣ ಮತ್ತೆ 'ನಾನೇ ರಾಜ' ಸಿನಿಮಾ ಮೂಲಕ‌ ಅದೃಷ್ಟ ಪರೀಕ್ಷೆಗಳಿದಿದ್ದಾರೆ.

ನಾನೇ ರಾಜ ನಿಸಿಮಾದ ತಂಡದಿಂದ ಸುದ್ದಿಗೋಷ್ಠಿ

ಹೌದು, ಸದ್ಯಕ್ಕೆ ಪೋಸ್ಟರ್ ಹಾಗೂ ಟ್ರೇಲರ್​ನಿಂದಲೇ ಲೈಟ್ ಆಗಿ ಸದ್ದು ಮಾಡ್ತಿರೋ ನಾನೇ ರಾಜ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್​ ಆಗಿದೆ. ಪಕ್ಕಾ ಹಳ್ಳಿ ಸೊಗಡಿನ ಕಥೆ ಆಧರಿಸಿಕೊಂಡು ಬರ್ತಾ ಇರೋ ಈ ಚಿತ್ರಕ್ಕೆ ಗಣೇಶ್ ಸಹೋದರ ಸೂರಜ್ ಕೃಷ್ಣ ಸಾಕಷ್ಟು ಸಿದ್ಧತೆ ಮಾಡಿಕೊಂಡು ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೂ ಸೋನಿಕಾ ಗೌಡ ನಾಯಕಿಯಾಗಿ ಗ್ಲ್ಯಾಮರ್ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.

ಇನ್ನು ನಾನೇ ರಾಜ ಸಿನಿಮಾವನ್ನು ಎಂ ಆನಂದ್ ನಿರ್ಮಾಣ ಮಾಡಿದ್ರೆ, ಶ್ರೀನಿವಾಸ್ ಶಿವಾರ ನಿರ್ದೇಶಕರಾಗಿದ್ದಾರೆ. ಹಾಗೂ ಖಳ‌ ನಾಯಕರಾಗಿ ಡ್ಯಾನಿ ಕುಟ್ಟಪ್ಪ ಕಾಣಿಸಿಕೊಂಡಿದ್ದು, ಶ್ರೀನಿವಾಸ ಶಿವಾರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ವಿಶೇಷ ಅಂದ್ರೆ, ಈ ವಾರ ಒಂಬತ್ತು ಸಿನಿಮಾಗಳು ರಿಲೀಸ್ ಆಗುತ್ತಿದೆ, ಆದರಲ್ಲಿ ಈ ನಾನೇ ರಾಜ ಸಿನಿಮಾ ಇದೇ 29 ರಂದು ತೆರೆಕಾಣಲಿದ್ದು, ಎಲ್ಲರೂ ಬಂದು ಚಿತ್ರ ವೀಕ್ಷಿಸುವಂತೆ ಚಿತ್ರತಂಡ ಮನವಿ ಮಾಡಿದೆ.

ABOUT THE AUTHOR

...view details