ಆರ್.ಚಂದ್ರು ನಿರ್ದೇಶನದ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಐಲವ್ಯೂ' ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವಾಗ್ತಿದೆ. ಈ ಚಿತ್ರದಲ್ಲಿ ಉಪ್ಪಿ ಜತೆ ನಟಿಸಿರುವ ಗುಳಿ ಕೆನ್ನೆ ಹುಡುಗಿ ರಚ್ಚು ಒಂದು ಸಾಂಗ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ರಿಲೀಸ್ಗೂ ಮುನ್ನವೇ ಈ ವಿಚಾರ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಅಲ್ಲದೆ ಪ್ರಿಯಾಂಕ ಉಪೇಂದ್ರ ಹಾಗೂ ರಚಿತಾ ರಾಮ್ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿತ್ತು.
ಡಲ್ ಹೊಡೆದ ಡಿಂಪಲ್ ಕ್ವೀನ್: ಸ್ಯಾಂಡಲ್ವುಡ್ನ ಬುಲ್ಬುಲ್ ಕಣ್ಣೀರು ಹಾಕಿದ್ದೇಕೆ? - undefined
ಬುಲ್ ಬುಲ್ ಬೆಡಗಿ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ. ಸದಾ ನಗುಮೊಗದ ಈ ಸುಂದರಿ ಕಣ್ಣಂಚಲ್ಲಿ ನೀರು ಸುರಿಯಲು ಕಾರಣ 'ಐಲವ್ಯು'!
ತಮ್ಮ ಪಾತ್ರಕ್ಕೆ ಕೇಳಿಬಂದ ನೆಗೆಟಿವಿಟಿಗೆ ರಚಿತ ಕೂಡ ಬೇಜಾರ್ ಆಗಿ,ಇನ್ಮುಂದೆ ಹೀಗೆ ಬೋಲ್ಡ್ ಆಗಿ ನಟಿಸುವುದಿಲ್ಲ ಎಂದು ಫರ್ಮಾನು ಹೊರಡಿಸಿದರು. ಈಗ ಎಲ್ಲವೂ ಕೂಲ್ ಆಗಿದೆ ಅನ್ನೋವಷ್ಟರಲ್ಲಿ ರಚಿತಾ ಭಾವುಕರಾಗಿ ಗಳಗಳನೆ ಅತ್ತಿದ್ದಾರೆ. ಅದಕ್ಕೆ ಕಾರಣ ಅವರ ತಂದೆ 'ಐಲವ್ಯೂ'ಚಿತ್ರ ನೋಡದಿರುವುದು!
ರಚಿತಾ,ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ಇವರ ಬೆನ್ನಿಗೆ ನಿಂತು ಸಾಥ್ ಕೊಟ್ಟಿದ್ದು ಅವರ ತಂದೆ. ಆದರೆ, ತಮ್ಮ ಮಗಳು 'ಐಲವ್ಯೂ'ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ತಂದೆಗೆ ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ಅವರು ಸಿನಿಮಾ ನೋಡಲು ಬಂದಿಲ್ಲ ಎಂದು ಖಾಸಗಿವಾಹಿನಿಯೊಂದರಲ್ಲಿ ರಚಿತಾ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.