ಕರ್ನಾಟಕ

karnataka

ETV Bharat / sitara

ಎರಡನೇ ಲಾಕ್​ಡೌನ್ ಬಳಿಕ ಚಿತ್ರಮಂದಿರಗಳಲ್ಲಿ 'ಕಾಗೆ ಮೊಟ್ಟೆ' - second lockdown

ಕೋವಿಡ್‌ ಅನ್ ಲಾಕ್ ಬಳಿಕ ಹೊಸ ಕನ್ನಡ ಸಿನಿಮಾ ಕಾಗೆ ಮೊಟ್ಟೆ ಆಗಸ್ಟ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಎರಡನೇ ಲಾಕ್​ಡೌನ್ ಬಳಿಕ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವ ಮೊದಲ ಚಿತ್ರ ಇದು...
ಎರಡನೇ ಲಾಕ್​ಡೌನ್ ಬಳಿಕ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವ ಮೊದಲ ಚಿತ್ರ ಇದು...

By

Published : Jul 22, 2021, 9:59 PM IST

ಕಳೆದ ವರ್ಷ ಅನ್ ಲಾಕ್ ಆದಾಗ ಆಕ್ಟ್ 1978 ಸಿನಿಮಾ ತೆರೆಗೆ ಬಂದಿತ್ತು. ಅನ್ ಲಾಕ್ ಬಳಿಕ ತೆರೆ ಕಂಡ ಮೊದಲ ಕನ್ನಡ ಚಿತ್ರ ಇದಾಗಿತ್ತು. ಆದ್ರೆ ಈ ವರ್ಷ 2ನೇ ಲಾಕ್‌ಡೌನ್ ಬಳಿಕ ತೆರೆಗೆ ಬರ್ತಿರುವ ಸಿನಿಮಾ ಕಾಗೆ ಮೊಟ್ಟೆ.

ಹೌದು, ವಿಷ್ಣು ಸರ್ಕಲ್ ಸಿನಿಮಾ ಬಳಿಕ ಜಗ್ಗೇಶ್ ದೊಡ್ಡಮಗ ಗುರುರಾಜ್ ಜಗ್ಗೇಶ್ ಅಭಿನಯದ ಸಿನಿಮಾ ಇದು. ಕೊರೊನಾಗೂ ಮುನ್ನವೇ ನಾನಾ ಕಾರಣಗಳಿಂದ ತಡವಾಗ್ತಾ ಬಂದಿದ್ದ ಕಾಗೆ ಮೊಟ್ಟೆ ಕೊರೊನಾ ಕಾಲದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ರಿಲೀಸ್​ಗೆ ರೆಡಿಯಾಗಿದೆ. ಆಗಸ್ಟ್ 6ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ದೇಶಕ ಬಿ.ಕೆ ಚಂದ್ರಹಾಸ್ ಪ್ಲಾನ್‌ ಮಾಡಿದ್ದಾರೆ.

ಅಂದ ಹಾಗೆ ಗುರುರಾಜ್ ಜಗ್ಗೇಶ್ ಜೊತೆ ಮಾದೇಶ್ ಹಾಗೂ ಹೇಮಂತ್ ಕೂಡಾ ಚಿತ್ರದಲ್ಲಿದ್ದಾರೆ. ಸೌಜನ್ಯ ಚಿತ್ರದಲ್ಲಿ ವೇಶ್ಯೆಯ ಪಾತ್ರ ನಿರ್ವಹಿಸಿದ್ದಾರೆ. ತನುಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶರತ್ ಲೋಹಿತಾಶ್ವ, ಪೊನ್ನಂಬಲ ಕೂಡಾ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದಿದ್ದು, ಶ್ರೀವತ್ಸ ಸಂಗೀತ ಹಾಗು ಪಿ.ಎಲ್, ರವಿ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ.

ABOUT THE AUTHOR

...view details