ಕನ್ನಡದ ಕೆಲ ಧಾರಾವಾಹಿಗಳು ರೋಚಕ ತಿರುವು, ಅದ್ಭುತ ದೃಶ್ಯ, ಹಿನ್ನೆಲೆ ಸಂಗೀತ, ಅತ್ಯುತ್ತಮ ತಾರಾಗಣದ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿವೆ. ಇದೀಗ ಕನ್ನಡದ ಮತ್ತೊಂದು ಮೆಗಾ ಧಾರಾವಾಹಿ 1000 ಕಂತುಗಳನ್ನು ಪೂರೈಸುತ್ತಿದ್ದು, ಕುತೂಹಲಕಾರಿ ಹಂತಕ್ಕೆ ಬಂದು ತಲುಪಿದೆ.
ಹೌದು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ, ಖ್ಯಾತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರ ‘ನಂದಿನಿ' ಧಾರಾವಾಹಿ ಮದುವೆ ಸಂಭ್ರಮಕ್ಕೆ ಬಂದು ನಿಂತಿದೆ.
ಜನನಿಯನ್ನು ಕಳೆದುಕೊಂಡ ವಿರಾಟ್ ಬದುಕಿನಲ್ಲಿ ನಂದಿನಿ ಆಗಮನವಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಾರೆ. ಇದೀಗ ವಿರಾಟ್ ಹಾಗೂ ನಂದಿನಿ ಮದುವೆ ಮಾಡಲು ವೇದಿಕೆ ಸಜ್ಜಾಗಿದ್ದು, ಭಾರೀ ಕುತೂಹಲಕಾರಿ ಹಂತಕ್ಕೆ ಬಂದು ತಲುಪಿದೆ.
ಹೀಗೆ ಅನೇಕ ತಿರುವುಗಳಿರುವ ‘ನಂದಿನಿ’ ಧಾರಾವಾಹಿಯ ಮದುವೆ ಸಂಭ್ರಮವನ್ನು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ವಿಶೇಷ ಗ್ರಾಫಿಕ್ಸ್ ನಿಂದ ಸಹ ‘ನಂದಿನಿ’ ಪ್ರೇಕ್ಷಕರ ಮನಗೆದ್ದಿದೆ.
ನಿತಿನ್ ನಿರ್ದೇಶನದ ಈ 'ನಂದಿನಿ' ಧಾರಾವಾಹಿಯಲ್ಲಿ ನಿತ್ಯಾ ರಾಮ್, ಕಾವ್ಯ ಶಾಸ್ತ್ರಿ, ಛಾಯಾ ಸಿಂಗ್, ವಿನಯ್ ಗೌಡ, ರಾಜೇಶ್ ಧ್ರುವ, ಜಯಶ್ರೀ, ರಶ್ಮಿ, ರೇಖಾ ಕೃಷ್ಣಪ್ಪ ಹಾಗೂ ಇತರರು ಪ್ರಮುಖ ಪ್ರಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30 ಕ್ಕೆ ‘ನಂದಿನಿ’ ಪ್ರಸಾರವಾಗುತ್ತಿದೆ.