ಕನ್ನಡ ಚಿತ್ರರಂಗ ಮಾತ್ರಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟೈಟಲ್ ಹಾಗೂ ಅದ್ಧೂರಿ ಮೇಕಿಂಗ್ನಿಂದಲೇ ಭಾರಿ ಸದ್ದು ಮಾಡುತ್ತಿರುವ ಮದಗಜ (Madhagaja) ಸಿನಿಮಾದ ಟೈಟಲ್ ಸಾಂಗ್ಅನ್ನು ಚಿತ್ರತಂಡ ಅನಾವರಣ ಮಾಡಿದೆ.
ಭರಾಟೆ ಚಿತ್ರದ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Srimurali) ಅಭಿನಯದ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ'ದ ಟ್ರೈಲರ್ ಭಾರಿ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾದ ಟೈಟಲ್ ಹಾಡನ್ನ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'ಮದಗಜ' ಟೈಟಲ್ ಹಾಡು ಅಪ್ಪುಗೆ ಅರ್ಪಣೆ ಇಂದು ಸಾಂಗ್ ಬಿಡುಗಡೆಗೂ ಮುನ್ನ ಮದಗಜ ಚಿತ್ರತಂಡ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಈ ವೇಳೆ ಭಾವುಕರಾದ ಶ್ರೀಮುರಳಿ,' ಮದಗಜ' ಟೈಟಲ್ ಸಾಂಗ್ ಅಪ್ಪುಮಾಮಗೆ ಅರ್ಪಣೆ ಅಂದರು.
ಅದ್ಧೂರಿಯಾಗಿ 'ಮದಗಜ' ಟೈಟಲ್ ಹಾಡನ್ನು (Madhagaja title song) ಚಿತ್ರೀಕರಣ ಮಾಡಲಾಗಿದೆ. ಬೃಹತ್ ಸೆಟ್ ಮತ್ತು ಅದ್ಧೂರಿ ಮೇಕಿಂಗ್ನಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಜೊತೆಗೆ ಶ್ರೀಮುರಳಿ ಡ್ಯಾನ್ಸ್ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ಇನ್ನು ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಈ ಹಾಡನ್ನು ಸಂತೋಷ್ ವೆಂಕಿ ಹಾಡಿದ್ದಾರೆ. ಶ್ರೀಮುರಳಿಗೆ ನಟಿ ಆಶಿಕಾ ರಂಗನಾಥ್ (Ashika Ranganath) ಜೋಡಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಈ ಚಿತ್ರದಲ್ಲಿ ಬಹು ಮುಖ್ಯ ಪಾತ್ರ ಮಾಡಿದ್ದಾರೆ.
ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ,ತೆಲುಗು, ತಮಿಳು ಭಾಷೆಯಲ್ಲಿ 'ಮದಗಜ' ಸಿನಿಮಾ ಬಿಡುಗಡೆ ಆಗಲಿದೆ.