ಕರ್ನಾಟಕ

karnataka

ETV Bharat / sitara

ಪ್ರೇತಾತ್ಮಗಳಿಗೆ ಪ್ರೇತಾತ್ಮ 'ಸಕೂಚಿ' - sakuchi trailer

ಹಾರರ್​ ಥ್ರಿಲ್ಲರ್​ ಚಿತ್ರ 'ಸಕೂಚಿ' ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದೆ. ಬಹುತೇಕ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

sakuchi
sakuchi

By

Published : Oct 25, 2021, 9:16 AM IST

'ಪದ್ಮಾವತಿ' ಧಾರಾವಾಹಿ ಮೂಲಕ ಪ್ರಖ್ಯಾತಿ ಹೊಂದಿರುವ ತ್ರಿವಿಕ್ರಮ 'ಸಕೂಚಿ' ಸಿನಿಮಾದ ಜಪ ಮಾಡುತ್ತಿದ್ದಾರಂತೆ.

ಹೌದು, ಟೈಟಲ್​ನಿಂದಲೇ ಗಮನ ಸೆಳೆಯುತ್ತಿರುವ 'ಸಕೂಚಿ' ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಅನಾವರಣ ಮಾಡಲಾಯಿತ್ತು. ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ತ್ರಿವಿಕ್ರಮ, 'ಸಕೂಚಿ' ಕಮರ್ಷಿಯಲ್ ಸಿನಿಮಾ. ಇದರಲ್ಲಿ ಹಾರಾರ್, ಪ್ರೇಮಕಥೆ ಎಲ್ಲವೂ ಇದೆ. ಚಿತ್ರೀಕರಣದ ಸಮಯದಲ್ಲಾದ ವಿಶೇಷ ಅನುಭವಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ನಿರ್ದೇಶಕ ಎಸ್. ಅಶೋಕ್ ಮಾತನಾಡಿ, 'ಸಕೂಚಿ' ಸಿನಿಮಾ ಒಂದು‌ ಪ್ರಯೋಗ. ಪ್ರೇತಾತ್ಮಗಳಿಗೆ ಪ್ರೇತಾತ್ಮ ಈ ಸಕೂಚಿ ಎಂಬ ವಿಷಯವನ್ನಿಟ್ಟುಕೊಂಡು ಕಥೆ ಮಾಡಿ ನಿರ್ಮಾಪಕರಿಗೆ ಹೇಳಿದೆ. ಈಗ ಸಿನಿಮಾ ಸಿದ್ಧವಾಗಿದೆ. ಎಲ್ಲರೂ ನೋಡಿ ಶುಭ ಹಾರೈಸಬೇಕೆಂದರು.

ಸಕೂಚಿ ಚಿತ್ರತಂಡ

ತ್ರಿವಿಕ್ರಮ್​ಗೆ ನಾಯಕಿಯಾಗಿ ಡಯಾನ ಕಾಣಿಸಿಕೊಂಡಿದ್ದಾರೆ. ಜೊತೆಗೆ ಡಾಲಿ ರಾಜೇಶ್, ಸುಕುಮಾರ್, ಸುಮನರಾವ್, ಸಂಜಯ್ ರಾಜ್, ಅಶೋಕ್ ಸೇರಿದಂತೆ ಅನೇಕ ನಟ, ನಟಿಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೃದಯಶಿವ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದು, ಗಣೇಶ್ ಗೋವಿಂದಸ್ವಾಮಿ ಸಂಗೀತ ನೀಡಿದ್ದಾರೆ. ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ ಹಾಗೂ ಆನಂದ್ ಯಡಿಯೂರು ನೃತ್ಯ ನಿರ್ದೇಶನ ಹಾಗೂ ಕುಂಫು ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ತ್ರಿವಿಕ್ರಮ, ಡಯಾನ

ಅಶೋಕ್ ಎಸ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಜೆ ಅವರ ಸಹ ನಿರ್ಮಾಣವಿದೆ. ನಿರ್ಮಾಪಕ ಬಿ.ಸಿ.ಅಶ್ವಿನ್, ಕ್ರಿಯೇಟಿವ್ ಹೆಡ್ ಹಾಗೂ ಕಾರ್ಯಕಾರಿ ನಿರ್ಮಾಪಕ ಚಂದ್ರಶೇಖರ್ ಕೆ.ಆರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಸಕೂಚಿ ' ಸದ್ಯದಲ್ಲೇ ತೆರೆ ಕಾಣಲಿದೆ.

ABOUT THE AUTHOR

...view details