ಬೆಂಗಳೂರು:ಬಹುಭಾಷಾ ನಟಿ ಸಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ ಹಾರರ್ ಸಿನಿಮಾ ಕಸ್ತೂರಿ ಮಹಲ್ ಮೇ 13ರಂದು ಬಿಡುಗಡೆಯಾಗುತ್ತಿದೆ. ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ ಇದಾಗಿದ್ದು, ವಿಭಿನ್ನ ಕಥೆ ಹೊಂದಿದೆ ಎಂದು ಚಿತ್ರತಂಡ ಹೇಳಿದೆ.
ಈ ಕುರಿತು ನಟಿ ಸಾನ್ವಿ ಶ್ರೀವಾತ್ಸವ್ ಮಾತನಾಡಿ, ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ, ನೋಡಿ ಹರಸಿ ಎಂದರು. ಚಿತ್ರದ ನಾಯಕ ನಟ ಸ್ಕಂದ ಮಾತನಾಡಿ, ಇದೊಂದು ಉತ್ತಮ ಚಿತ್ರ. ನಿರ್ದೇಶಕರು ಉತ್ತಮ ಪಾತ್ರವನ್ನು ನನಗೆ ನೀಡಿದ್ದಾರೆ ಎಂದು ಹೇಳಿ ಧನ್ಯವಾದ ಅರ್ಪಿಸಿದರು.