ಕೊರೊನಾದಿಂದಾಗಿ ಸತತ ಆರು ತಿಂಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಶೂಟಿಂಗ್ ಹಾಗೂ ಮುಹೂರ್ತ ಇಲ್ಲದೆ ಸ್ತಬ್ಧವಾಗಿತ್ತು. ಇದೀಗ ಸ್ಯಾಂಡಲ್ವುಡ್ ಸಿನಿಮಾ ಚಟುವಟಿಕೆಗಳು ಶುರುವಾಗಿವೆ. ನಿಧಾನಕ್ಕೆ ಕನ್ನಡ ಚಿತ್ರರಂಗದಲ್ಲಿ ಎರಡು ದಿನದಿಂದ ಸಿನಿಮಾ ಚಿತ್ರೀಕರಣ ಹಾಗೂ ಹೊಸ ಚಿತ್ರಗಳು ಸೆಟ್ಟೇರುತ್ತಿವೆ.
ಈಗ ದಿಯಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ಪೃಥ್ವಿ ಅಂಬಾರ್, ಅಭಿನಯದ ಕ್ಯಾಚೀ ಶೀರ್ಷಿಕೆಯ 'ಶುಗರ್ ಲೆಸ್' ಸಿನಿಮಾ ಇಂದು ಸೆಟ್ಟೇರಿದೆ. ಚಾಮರಾಜಪೇಟೆ ಹತ್ತಿರದ ಗುರುರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ, 'ಶುಗರು ಲೆಸ್' ಸಿನಿಮಾಕ್ಕೆ ಸರಳವಾಗಿ ಮುಹೂರ್ತ ಮಾಡಲಾಗಿದೆ.
ಪೃಥ್ವಿ ಅಂಬಾರ್ ಹೊಸ ಸಿನಿಮಾ 'ಶುಗರ್ ಲೆಸ್' ಮಠ ಹಾಗು ಎದ್ದೇಳು ಮಂಜುನಾಥ ಖ್ಯಾತಿಯ ಗುರು ಪ್ರಸಾದ್ ಈ ಸಿನಿಮಾಕ್ಕೆ ಕ್ಲಾಪ್ ಮಾಡಿದ್ದು, ನಿರ್ದೇಶಕ ಪವನ್ ಒಡೆಯರ್ ಕ್ಯಾಮರಾ ಚಾಲನೆ ಮಾಡಿ 'ಶುಗರ್ ಲೆಸ್' ಚಿತ್ರ ತಂಡಕ್ಕೆ ಶುಭ ಹಾರೈಯಿಸಿದ್ದಾರೆ. ಪೃಥ್ವಿ ಅಂಬಾರ್ ಜೊತೆ ಯುವ ನಟಿ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿದ್ದಾರೆ. ಪುಷ್ಕರ್ ಫಿಲ್ಮ್ ಸಹಯೋಗದಲ್ಲಿ ಕೆ.ಎಂ. ಶಶಿಧರ್ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ.
ವಿಭಿನ್ನ ಪೋಸ್ಟರ್ ಮಾಡಿ ತಲೆಗೆ ಹುಳ ಬಿಟ್ಟಿದ್ದ ಚಿತ್ರತಂಡ, ಇದು ವಯಸ್ಸಾದ ಮೇಲೆ ಶುಗರು ಬರುತ್ತೆ ಎಂಬ ಸಂದೇಶವನ್ನ ಹೇಳೋದಿಕ್ಕೆ ಹೊರಟ್ಟಿದ್ಯಾ ಎಂಬ ಪ್ರಶ್ನೆಗಳು ಮೂಡಿವೆ. ಸದ್ಯದಲ್ಲೇ ಶುಗರ್ ಲೆಸ್ ಚಿತ್ರದ ಶೂಟಿಂಗ್ ಆರಂಭ ಮಾಡಿ ಮುಂದಿನ ವರ್ಷ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ.