ಕಳೆದ ವರ್ಷ ಸಮಂತಾ ಅಕ್ಕಿನೇನಿ ಹಾಗೂ ರಾಕುಲ್ ಪ್ರೀತ್ ಸಿಂಗ್ ಟಾಲಿವುಡ್ನಲ್ಲಿ ಮೊದಲ ಸ್ಥಾನದಲ್ಲಿ ಇದ್ದರು. ಆದರೆ, 'ಚಲೋ' ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟ ಕೊಡಗು ಬ್ಯೂಟಿ ರಶ್ಮಿಕಾ ಮಂದಣ್ಣ ಹಾಗೂ 'ಒಕ ಲೈಲಾ ಕೋಸಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಮಂಗಳೂರು ಹುಡುಗಿ ಪೂಜಾ ಹೆಗ್ಡೆ ಇಬ್ಬರೂ ಈ ವರ್ಷದ ಟಾಲಿವುಡ್ ನಂಬರ್ ಒನ್ ನಟಿಯರು. 'ಒಕ ಲೈಲಾ ಕೋಸಂ' ಹಾಗೂ 'ಮುಕುಂದ' ಚಿತ್ರಗಳು ಪೂಜಾಗೆ ಅಷ್ಟು ಹೆಸರು ನೀಡದಿದ್ದರೂ ಅಲ್ಲು ಅರ್ಜುನ್ ಜೊತೆ ನಟಿಸಿದ 'ದುವ್ವಡ ಜಗನ್ನಾಥಂ' ಸಿನಿಮಾ ಅವರಿಗೆ ಒಳ್ಳೇ ಬ್ರೇಕ್ ನೀಡಿತು. ಇದೀಗ ಮಹೇಶ್ ಬಾಬು ಜೊತೆ ನಟಿಸಿದ 'ಮಹರ್ಷಿ' ಚಿತ್ರ ಕೂಡಾ ಪೂಜಾಗೆ ಒಳ್ಳೆ ಸ್ಟಾರ್ಡಮ್ ತಂದುಕೊಟ್ಟಿದೆ.
ಎಲ್ಲೆಲ್ಲೂ ಸಲ್ಲುವ ಕನ್ನಡ ಸುಂದರಿಯರು.. ಟಾಲಿವುಡ್ನಲ್ಲಿ ಈ ವಯ್ಯಾರಿಗಳದ್ದೇ ಹವಾ..!
ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಅಷ್ಟು ಸುಲಭವಲ್ಲ. ಸ್ಟಾರ್ಡಮ್ ಗಿಟ್ಟಿಸಿಕೊಳ್ಳುವುದಂತೂ ಬಹಳ ಕಷ್ಟಕರ. ಇನ್ನೂ ಹೆಚ್ಚಿಗೆ ಹೇಳುವುದಾದರೆ ಬೇರೆ ಭಾಷೆಯ ಚಿತ್ರರಂಗಕ್ಕೆ ಹೋಗಿ ಅಲ್ಲಿ ನಂಬರ್ ಒನ್ ಸ್ಥಾನ ಗಳಿಸಲು ಶ್ರಮ, ಅದೃಷ್ಟ ಎರಡೂ ಬೇಕು.
ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಟಾಲಿವುಡ್ನಲ್ಲಿ ಕಡಿಮೆ ಸಮಯದಲ್ಲೇ ಶೇ.90ರಷ್ಟು ಸಕ್ಸಸ್ ಪಡೆದಿರುವ ರಶ್ಮಿಕಾ ಈಗ ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರಶ್ಮಿಕಾ ಸಂಭಾವನೆ ಕೂಡಾ ಹೆಚ್ಚಾಗಿದೆಯಂತೆ. ಸದ್ಯಕ್ಕೆ ರಶ್ಮಿಕಾ 'ಸರಿಲೇರು ನೀಕೆವರು', 'ಭೀಷ್ಮ' ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ತಮಿಳು ಸಿನಿಮಾವೊಂದರಲ್ಲಿ ಕೂಡಾ ರಶ್ಮಿಕಾ ನಟಿಸುತ್ತಿದ್ದಾರೆ.
ರಶ್ಮಿಕಾ, ಪೂಜಾ ಹೆಗ್ಡೆ ಮಾತ್ರವಲ್ಲದೆ ನಭಾ ನಟೇಶ್, ಶ್ರದ್ಧಾ ಶ್ರೀನಾಥ್, ಹರಿಪ್ರಿಯ ಹಾಗೂ ಇನ್ನಿತರ ಕನ್ನಡತಿಯರು ತೆಲುಗಿನಲ್ಲಿ ನಟಿಸಿ ತೆಲುಗು ಪ್ರೇಕ್ಷಕರನ್ನು ಗೆದ್ದಿದ್ದಾರೆ. ಅನುಷ್ಕಾ ಶೆಟ್ಟಿ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ತೆಲುಗು ಚಿತ್ರರಂಗದ ಮೂಲಕವೇ ತಮ್ಮ ಸಿನಿಮಾ ಕರಿಯರ್ ಆರಂಭಿಸಿದ ಸ್ವೀಟಿ ಅನುಷ್ಕಾ ಈಗ ತೆಲುಗು ಹುಡುಗಿಯೇ ಆಗಿಹೋಗಿದ್ದಾರೆ.