ಕನ್ನಡ ಚಿತ್ರ ರಂಗದ ‘ಬೆಳದಿಂಗಳ ಬಾಲೆ’ ಹಾಗೂ ‘ಹೂಮಳೆ’ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ಸುಮನ್ ನಗರ್ಕರ್ ಹಲವು ವರ್ಷಗಳ ಸಿನಿಮಾ ನಿರ್ಮಾಣದ ಕನಸು ನನಸಾಗಿದೆ. ಅವರ ನಿರ್ಮಾಣದ ಬಬ್ರೂ ಸಿನಿಮಾ ಅಮೆರಿಕದಲ್ಲಿಯೇ ಸಂಪೂರ್ಣ ನಿರ್ಮಾಣ ಮಾಡಿದ್ದು, ಇದೇ ನವೆಂಬರ್ 1ಕ್ಕೆ ತೆರೆಗೆ ತರುವ ಪ್ಲಾನ್ ನಡೆದಿದೆ.
ಅಮೆರಿಕದಲ್ಲಿ ಕನ್ನಡದ ಮೊಟ್ಟ ಮೊದಲ ಹಾಲಿವುಡ್ ಸಿನಿಮಾ ‘ಬಬ್ರೂ’ ಪ್ರದರ್ಶನ ಆಗುತ್ತಿದೆ. ಇದು ಸುಮನ್ ನಗರ್ಕರ್ ಪ್ರೊಡಕ್ಷನ್ ಸಿನಿಮಾ. ಬಬ್ರೂ ಶೀರ್ಷಿಕೆ ಸಹ ಕನ್ನಡದ ‘ಬಬ್ರುವಾಹನ’ ಸಿನಿಮಾದಿಂದ ಸ್ಪೂರ್ತಿ ಪಡೆದು ಆಯ್ಕೆ ಮಾಡಿಕೊಳ್ಳಲಾಗಿದೆ.
‘ಬಬ್ರೂ’ ಸಿನಿಮಾ ಹಾಲಿವುಡ್ನಲ್ಲಿ ತಯಾರಾದ ಕನ್ನಡ ಸಿನಿಮಾ. ಒಂದು ಪ್ರಯಾಣದಲ್ಲಿ ಮೂಡಿಬಂದಿರುವ ಕಥಾ ವಸ್ತು. ಇತ್ತೀಚಿಗೆ ಚಿತ್ರದ ಪೋಸ್ಟರ್ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿ ಶುಭ ಕೋರಿದ್ದರು.
ಸುಮನ್ ನಗರ್ಕರ್ ಹಾಗೂ ಪತಿ ಗುರು ಯುಗ ಕ್ರಿಯೇಷನ್ ‘ಬಬ್ರೂ’ ಸಿನಿಮಾವನ್ನು ಕಸ್ತೂರಿ ಮೀಡಿಯಾ ಹಾಗೂ ಸ್ಯಾಂಡಲ್ವುಡ್ ಗೆಳೆಯರ ಬಳಗ ವತಿಯಿಂದ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.