ಕರ್ನಾಟಕ

karnataka

ETV Bharat / sitara

ಬೈಟು ಲವ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಕ್ರೇಜಿ ಸ್ಟಾರ್ ರವಿಚಂದ್ರನ್ & ಚಿತ್ರರಂಗದ ಸ್ನೇಹಿತರು - by two love pre release program

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಿದೆ ಈ ಚಿತ್ರತಂಡ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕ ಹರಿ ಸಂತೋಷ್ ಅವ್ರ ನಂಬಿಕೆ. ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ..

kannada film industry team wishes for success of by two love film
ಬೈ ಟು ಲವ್ ಚಿತ್ರದ ಯಶಸ್ಸಿಗೆ ಶುಭ ಹಾರೈಕೆ

By

Published : Feb 16, 2022, 12:05 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರೋ 'ಬೈ ಟು ಲವ್' ಚಿತ್ರ ಇದೇ 18ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಿನ್ನೆ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು.

ಸ್ಯಾಂಡಲ್​ವುಡ್​ನಲ್ಲಿ ಅಲೆಮಾರಿ ಹಾಗೂ ಕಾಲೇಜು ಕುಮಾರ ಚಿತ್ರಗಳನ್ನು ನಿರ್ದೇಶಿಸಿ ಭರವಸೆ ಮೂಡಿಸಿರೋ ನಿರ್ದೇಶಕ ಹರಿ ಸಂತೋಷ್ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಬಜಾರ್ ಸಿನಿಮಾ ಬಳಿಕ‌ ಧನ್ವೀರ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ.

ಈ ಲವರ್ ಬಾಯ್​ಗೆ ಕಿಸ್ ಸುಂದರಿ ಶ್ರೀಲೀಲಾ ಜೋಡಿಯಾಗಿದ್ದಾರೆ. ಸದ್ಯ ಟ್ರೈಲರ್​ನಿಂದಲೇ ಸಖತ್​ ಸೌಂಡ್​ ಮಾಡ್ತಿರೋ ಬೈಟು ಲವ್ ಚಿತ್ರ ಇದೇ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಬೈಟು ಲವ್ ಚಿತ್ರದ ಯಶಸ್ಸಿಗೆ ಶುಭ ಹಾರೈಕೆ..

ರವಿಚಂದ್ರನ್ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ. ಕ್ರೇಜಿ ಸ್ಟಾರ್ ಜೊತೆಗೆ ನಟ ಶರಣ್, ನೆನಪಿರಲಿ ಪ್ರೇಮ್ ಫ್ಯಾಮಿಲಿ, ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನಾ ನಾಗರಾಜ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಬಳಿಕ ಮಾತನಾಡಿದ ನಟ ರವಿಚಂದ್ರನ್, ಈ ಚಿತ್ರದಲ್ಲಿ ಕ್ಯೂಟ್ ಲವ್ ಸ್ಟೋರಿ ಜೊತೆ ಎಮೋಷನ್ಸ್​ ಹೇಳೋದಿಕ್ಕೆ ಹೊರಟ್ಟಿದ್ದೀರ. ಕಣ್ಣಲ್ಲಿ ಕಣ್ಣಿಟ್ಟು ಯಾರು ಪ್ರೀತಿ ಮಾಡಲ್ವೋ ಅಂಥವರ ಪ್ರೀತಿ ಸಾಯುತ್ತೆ. ಈಗ ನಾನು ಮತ್ತೆ ಲವ್ ಮೂಡ್​ಗೆ ಹೋಗ್ತಾ ಇದ್ದೀನಿ ಎಂದು ಹೇಳಿದರು.

ಇನ್ನು ಶರಣ್, ಪ್ರೇಮ್ ಹಾಗೂ ಡಾರ್ಲಿಂಗ್ ಕೃಷ್ಣ ಮಾತನಾಡಿ, ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಿನಿಮಾದ ನಿರ್ದೇಶಕ ಹರಿ ಸಂತೋಷ್, ನಟ ಧನ್ವೀರ್ ಹಾಗೂ ಶ್ರೀಲೀಲಾ ಕಾಂಬಿನೇಷನ್ ಚೆನ್ನಾಗಿದೆ. ಟ್ರೈಲರ್ ಹಾಗೂ ಟೈಟಲ್ ಕೇಳಿದ್ರೆ ಈ ಸಿನಿಮಾ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎಂದು ಹೇಳಿ ಸಿನಿಮಾದ ಯಶಸ್ಸಿಗೆ ಹಾರೈಸಿದರು.

ಇದನ್ನೂ ಓದಿ:ಐದು ದಿನಕ್ಕೆ ಐದು ಕೋಟಿ ಕಲೆಕ್ಷನ್ ಮಾಡಿದ ಲವ್ ಮಾಕ್ ಟೈಲ್ 2 ಸಿನಿಮಾ

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಿದೆ ಈ ಚಿತ್ರತಂಡ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕ ಹರಿ ಸಂತೋಷ್ ಅವ್ರ ನಂಬಿಕೆ. ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಸಾಧು ಕೋಕಿಲ, ಶಿವರಾಜ್ ಕೆ. ಆರ್ ಪೇಟೆ,‌ ಕಾಮಿಡಿ ಕಿಲಾಡಿ ನಯನ ಸೇರಿ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ. ಟ್ರೈಲರ್​ನಿಂದಲೇ ಸಂಚಲನ ಸೃಷ್ಟಿಸಿರೋ ಬೈಟು ಲವ್ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ಇನ್ನೇನು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ABOUT THE AUTHOR

...view details