ಕರ್ನಾಟಕ

karnataka

ETV Bharat / sitara

ದೋಸ್ತಿ ಸರ್ಕಾರದ ಬಜೆಟ್... ಕನ್ನಡ ಚಿತ್ರೋದ್ಯಮದ ನಿರೀಕ್ಷೆಗಳೇನು..? - news kannada

ಈಗ ದೋಸ್ತಿ ಸರ್ಕಾರ ಬಜೆಟ್ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮಂಡಿಸುತ್ತಿರುವುದರಿಂದ ಈ ಬಾರಿಯ ಬಜೆಟ್​​​​ನಲ್ಲಿ  ಕನ್ನಡ ಚಿತ್ರರಂಗಕ್ಕೆ ಬಂಪರ್ ಕೊಡುಗೆಗಳನ್ನು ನೀಡ್ತಾರ ಹಾಗೂ ಜನತಾ ಟಾಕೀಸ್ ಹಾಗೂ ಫಿಲ್ಮ್ ಯುನಿವರ್ಸಿಟಿ ಸ್ಥಾಪನೆ ಅನುದಾನ ನೀಡುತ್ತಾರ ಎನ್ನುವ ಕುತೂಹಲ ಮೂಡಿದೆ.

ಕರ್ನಾಟಕ ಚಲನಚಿತ್ರ ಮಂಡಳಿ

By

Published : Feb 6, 2019, 6:57 PM IST

ಸಮ್ಮಿಶ್ರ ಸರ್ಕಾರದ ಬಹುನೀರಿಕ್ಷಿತ ಬಜೆಟ್ ಈ ಶುಕ್ರವಾರ ಮಂಡನೆಯಾಗಲಿದ್ದು ನಿರೀಕ್ಷೆ ಸಹಜವಾಗಿಯೇ ಗರಿಗೆದರಿವೆ. ಇತ್ತ ಕನ್ನಡ ಸಿನಿರಂಗ ಸಹ ಬಜೆಟ್​​ ಮೇಲೆ ನಿರೀಕ್ಷೆಗಳ ಕಂಗಳನ್ನಿಟ್ಟಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಸಿನಿಮಾ ನಂಟಿರೋದ್ರಿಂದ ಈ ಬಾರಿಯ ಬಜೆಟ್ ಮೇಲೆ ಕನ್ನಡ ಚಿತ್ರರಂಗವೂ ಬಾರಿ ಕುತೂಹಲದಿಂದ ಕಾಯ್ತಿದೆ. ಕುಮಾರಸ್ವಾಮಿ ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಜನತಾ ಟಾಕೀಸ್ ಹಾಗೂ ರಾಮನಗರದಲ್ಲಿ ಫಿಲ್ಮ್ ಯುನಿವರ್ಸಿಟಿ ಸ್ಥಾಪನೆಗೆ ಒತ್ತು ನೀಡುವುದಾಗಿ ಹೇಳಿದ್ದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಫಿಲ್ಮ್ ಯುನಿವರ್ಸಿಟಿ ಮಾಡ್ತಿವಿ ಎಂದು ಘೋಷಣೆ ಮಾಡಿದ್ರು. ಆದ್ರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ಇನ್ನು ಕುಮಾರಸ್ವಾಮಿಯವರು ತಮ್ಮ ಮಗನ ಸಿನಿಮಾ ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್‌ ಶೋ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನತಾ ಟಾಕೀಸ್ ಸ್ಥಾಪನೆಗೆ ಒತ್ತು ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ರು.

ಈಗ ದೋಸ್ತಿ ಸರ್ಕಾರ ಬಜೆಟ್ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮಂಡಿಸುತ್ತಿರುವುದರಿಂದ ಈ ಬಾರಿಯ ಬಜೆಟ್​​​​ನಲ್ಲಿ ಕನ್ನಡ ಚಿತ್ರರಂಗಕ್ಕೆ ಬಂಪರ್ ಕೊಡುಗೆಗಳನ್ನು ನೀಡ್ತಾರ ಹಾಗೂ ಜನತಾ ಟಾಕೀಸ್ ಹಾಗೂ ಫಿಲ್ಮ್ ಯುನಿವರ್ಸಿಟಿ ಸ್ಥಾಪನೆ ಅನುದಾನ ನೀಡುತ್ತಾರ ಎನ್ನುವ ಕುತೂಹಲ ಮೂಡಿದೆ.

ಇದರ ಜೊತೆಗೆ ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್​​​​ಗಳಲ್ಲಿ ಏಕರೂಪ ದರ ನಿಗದಿ ಹಾಗೂ ಪೈರಸಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎನ್ನುವ ವಿಚಾರಕ್ಕೆ ಈ ಬಾರಿಯ ಬಜೆಟ್​ ಕನ್ನಡ ಚಿತ್ರರಂಗದ ಪಾಲಿಗೂ ಮಹತ್ವವಾಗಿದೆ.

ABOUT THE AUTHOR

...view details