ಲಾಕ್ಡೌನ್ನಿಂದ ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಸಿನಿಮಾಗಳ ಬಿಡುಗಡೆ ಸೇರಿದಂತೆ ಎಲ್ಲಾ ಕೆಲಸಕ್ಕೂ ಬ್ರೇಕ್ ಬಿದ್ದಿದೆ. ಇದರಿಂದ ಇಡೀ ಚಿತ್ರರಂಗವೇ ಸಂಕಷ್ಟದಲ್ಲಿದೆ ಎಂದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಈ ವೇಳೆ ಅಕಾಡೆಮಿ ವತಿಯಿಂದ ಸಹಾಯ ಮಾಡಿ ಎಂದು ಚಿತ್ರರಂಗದ ಕೆಲವರು ಸಹಾಯ ಬಯಸಿ ಬಂದ್ದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಟಿ ತಾರ ಅವರ ಜೊತೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇವು ಎಂದು ಹೇಳಿದರು.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಸುನೀಲ್ ಪುರಾಣಿಕ್ ನಮ್ಮ ಸಮಸ್ಯೆಗಳನ್ನು ಅರಿತ ಮುಖ್ಯಮಂತ್ರಿಗಳ ಮಗ ಬಿವೈ ವಿಜಯೇಂದ್ರ ಅವರು ರಿಲಯನ್ಸ್ ಗ್ರೂಪ್ನಿಂದ 2 ಕೋಟಿ ರೂ. ಅನುದಾನದ ಮೊತ್ತ ನೀಡಿದ್ದಾರೆ. ಸದ್ಯ ಈ ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿದ್ದು, ಸಂಪೂರ್ಣ ಚಿತ್ರರಂಗಕ್ಕೆ ಮೀಸಲಿಟ್ಟಿದ್ದಾರೆ ಎಂದರು.
ಚಿತ್ರರಂಗದಲ್ಲಿ 15,000 ಮಂದಿ ಸಕ್ರಿಯವಾಗಿದ್ದೇವೆ. ಸದ್ಯ 6,000 ಮಂದಿಗೆ ಸಹಾಯ ಮಾಡಲು ಮುಖ್ಯಮಂತ್ರಿಗಳು ಒಪ್ಪಿ, ವಿಶೇಷ ಅಧಿಕಾರಿಯನ್ನು ಸಹ ನೇಮಕ ಮಾಡಿದ್ದಾರೆ. 6,000 ಮಂದಿಗೆ ಇನ್ನೆರಡು ದಿನಗಳಲ್ಲಿ 3,000 ರೂ. ಮೌಲ್ಯದ ಕೂಪನ್ ಸಿಗಲಿದೆ. ರಿಲಾಯನ್ಸ್ ಫ್ರೆಶ್ ಮಳಿಗೆಗಳಲ್ಲಿ ಕೂಪನ್ ತೋರಿಸಿ 3,000ರೂ.ಯಷ್ಟು ಅಗತ್ಯ ವಸ್ತುಗಳನ್ನು ಪಡೆಯಬಹುದು ಎಂದು ಹೇಳಿದರು.
ಈ ಅನುದಾನವನ್ನು ದುರುಪಯೋಗ ಆಗಬಾರದು ಎಂದು ಪ್ರತಿ ಕೂಪನ್ ಪಡೆದವರ ಮೊಬೈಲ್ ನಂಬರ್ ಹಾಗೂ ಅಧಾರ್ ನಂಬರ್ ಲಿಂಕ್ ಮಾಡಲಾಗುತ್ತದೆ. ಅವೆರಡೂ ಮ್ಯಾಚ್ ಆದರೆ ಮಾತ್ರ ಕೂಪನ್ ಬಳಸಬಹುದು ಎಂದು ಸುನೀಲ್ ಪುರಾಣಿಕ್ ತಿಳಿಸಿದರು.