ಕನ್ನಡ ಚಿತ್ರರಂಗದ ಮ್ಯೂಜಿಕ್ ಕಂಪೋಸರ್ ಅರ್ಜುನ್ ಜನ್ಯರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೇ 13, 1980ರಲ್ಲಿ ಬೆಂಗಳೂರಿನಲ್ಲಿ ಅರ್ಜುನ್ ಜನ್ಯ ಜನಿಸಿದರು. 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಲೋಕೇಶ್ ಕುಮಾರ್, ಅರ್ಜುನ್ ಜನ್ಯ ಅದ ಆಗಿದ್ದೇ ಒಂದು ರೋಚಕ ಕಥೆ.
ಇಂದು ಅರ್ಜುನ್ ಜನ್ಯ ಜನ್ಮದಿನ ಲೋಕೇಶ್ ಕುಮಾರ್, ಯಾರಪ್ಪ ಇವರು ಅಂತೀರಾ? ಇಂದು ಸ್ಯಾಂಡಲ್ವುಡ್ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿ ಹೊರ ಹೊಮ್ಮಿರುವ ಅರ್ಜುನ್ ಜನ್ಯ ಅವರ ಮೂಲ ಹೆಸರು. ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳ ಸಿನಿಮಾಗಳಿಗೆ ಮ್ಯೂಜಿಕ್ ನೀಡುವ ಅರ್ಜುನ್ ಜನ್ಯ, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನ ಎದುರಿಸಿ ಇಂದು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.
ಇಂದು ಅರ್ಜುನ್ ಜನ್ಯ ಜನ್ಮದಿನ ಫೋಟೋ ಸ್ಟುಡಿಯೋ ಹಾಗೂ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ್ತಿದ್ದ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ ಆಗೋದಕ್ಕೆ ಮುಖ್ಯ ಕಾರಣ ಅವರ ತಂದೆ ಅಶ್ವಥ್ ಕುಮಾರ್. ಹೌದು, ಅಶ್ವಥ್ ಕುಮಾರ್ ಹಾಗೂ ಅನುಸೂಯ ದಂಪತಿಯ ಎರಡನೇ ಮಗ ಅರ್ಜುನ್ ಜನ್ಯ. ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಮಕ್ಕಳಂತೆ ಆಟವಾಡಿ ಬೆಳೆಯಬೇಕಿದ್ದ ಅರ್ಜುನ್ ಜನ್ಯ ತಮ್ಮ ಏಳನೇ ವಯಸ್ಸಿಗೆ ತಂದೆಯನ್ನ ಕಳೆದುಕೊಂಡರು.
ಮನೆಯ ಆದಾರಸ್ತಂಭವಾಗಿದ್ದ ತಂದೆಯ ನಿಧನದಿಂದ ಅರ್ಜುನ್ ಜನ್ಯ ಕುಟುಂಬ ಕಷ್ಟದ ದಿನಗಳನ್ನು ಎದುರಿಸೋಕೆ ಶುರು ಮಾಡಿತು. ಆ ಸಮಯದಲ್ಲಿ ಅರ್ಜುನ್ ಜನ್ಯ ತಾಯಿ ಕೆಲಸ ಮಾಡಿ ಮಕ್ಕಳನ್ನು ಸಾಕಬೇಕಿತ್ತು. ತಾಯಿಯ ಕಷ್ಟ ಅರಿತ ಅರ್ಜುನ್ ಜನ್ಯ ವಿದ್ಯಾಭ್ಯಾಸವನ್ನ ಬಿಟ್ಟು ತಂದೆ ನೋಡಿಕೊಳ್ಳುತ್ತಿದ್ದ ಫೋಟೋ ಸ್ಟುಡಿಯೋವನ್ನು ಮುನ್ನಡೆಸುತ್ತಾ ಬಂದಿದ್ದರು.
ಇಂದು ಅರ್ಜುನ್ ಜನ್ಯ ಜನ್ಮದಿನ ಆದರೆ ಇಂದು ಅರ್ಜುನ್ ಜನ್ಯ ಸಂಗೀತ ನಿರ್ದೇಶಕನಾಗೋದಕ್ಕೆ ಅವರ ತಂದೆಯೇ ಸ್ಫೂರ್ತಿ. ಒಮ್ಮೆ ಅರ್ಜುನ್ ಜನ್ಯ ತಂದೆ ಜೊತೆ ತಮಿಳಿನ ರೋಜಾ ಸಿನಿಮಾವನ್ನ ನೋಡೋದಿಕ್ಕೆ ಹೋಗಿದ್ದರು. ಆಗ ಅರ್ಜುನ್ ತಂದೆ ಈ ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಬಗ್ಗೆ ಹೇಳಿದ್ದರು. ತಂದೆಯ ಮಾತುಗಳಿಂದ ಅರ್ಜುನ್ ಜನ್ಯ ಸ್ಫೂರ್ತಿಗೊಂಡು ಎ.ಆರ್.ರೆಹಮಾನ್ ಅವರ ಸಂಗೀತದ ಹಾಡುಗಳನ್ನ ಕೇಳೋದಕ್ಕೆ ಶುರು ಮಾಡಿದ್ದರು. ಇಲ್ಲಿಂದಲೇ ಜನ್ಯಗೆ ಸಂಗೀತದ ಬಗ್ಗೆ ಆಸಕ್ತಿ ಶುರುವಾಯಿತು.
ಇಂದು ಅರ್ಜುನ್ ಜನ್ಯ ಜನ್ಮದಿನ ಓದಿ:ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಮೂಲಕ ಬರ್ತ್‌ಡೇ ಆಚರಣೆಗೆ ಮುಂದಾದ ಸನ್ನಿ ಲಿಯೋನ್
ಸಂಗೀತ ಹಾಗು ಕೀ ಬೋರ್ಡ್ ಕಲಿಯಲು ಜೇಮ್ಸ್ ಮ್ಯೂಜಿಕ್ ಸ್ಕೂಲ್ನಲ್ಲಿ ಎರಡು ವರ್ಷಗಳ ಕಾಲ ವ್ಯಾಸಂಗ ಮಾಡಿದರು. ಬಳಿಕ ಆರ್ಕೆಸ್ಟ್ರಾಗಳಲ್ಲಿ ಕೀ ಬೋರ್ಡ್ ಪ್ಲೇಯರ್ ಕೆಲಸ ಮಾಡುತ್ತಿದ್ದರು. ಈ ವೇಳೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಪರಿಚಯವಾಗಿತ್ತು. ಅವರ ಬಳಿ ಅರ್ಜುನ್ ಕೆಲಸ ಮಾಡಿ ಮೆಚ್ಚುಗೆ ಗಳಿಸಿದರು. ಈ ಮೆಚ್ಚುಗೆ ಮತ್ತೊಬ್ಬ ಸಾಹಿತಿ ಕೆ.ಕಲ್ಯಾಣ್ ಬಳಿ ಕೆಲಸ ಮಾಡಲು ಅವಕಾಶ ದೊರೆಯಿತು. ಅರ್ಜುನ್ ಜನ್ಯ ಕೆ.ಕಲ್ಯಾಣ್ ಜೊತೆಗೆ ಬರೋಬ್ಬರಿ 30 ಸಿನಿಮಾಗಳಲ್ಲಿ ಕೆಲಸ ಮಾಡಿದರು. ಈ ಅನುಭವದಿಂದ ಅರ್ಜುನ್ ಜನ್ಯ 2006ರಲ್ಲಿ ದಿಲೀಪ್ರಾಜ್ ಮತ್ತು ಸಂಜನಾ ನಟಿಸಿರುವ ಆಟೋಗ್ರಾಫ್ ಪ್ಲೀಸ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾದರು.
ಇಂದು ಅರ್ಜುನ್ ಜನ್ಯ ಜನ್ಮದಿನ ಆಟೋಗ್ರಾಫ್ ಪ್ಲೀಸ್ ಚಿತ್ರದ ನಂತರ ಯುಗ, ಪಟ್ರೆ ಲವ್ಸ್ ಪದ್ಮ, ಧಿಮಾಕು, ಸ್ಲಂ ಬಾಲಾ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದರು. ಆದರೆ ಈ ಸಿನಿಮಾಗಳು ಅರ್ಜುನ್ ಜನ್ಯಗೆ ಅಷ್ಟೊಂದು ಹೆಸರು ತಂದು ಕೊಡಲಿಲ್ಲ. ಈ ಸಮಯದಲ್ಲಿ ಗಾಂಧಿನಗರದಲ್ಲಿ ಅರ್ಜನ್ ಜನ್ಯಗೆ ಐರನ್ ಲೆಗ್ ಅಂತಾ ಕರೆಯಲು ಪ್ರಾರಂಭಿಸಿದರು. ಅರ್ಜುನ್ ಜನ್ಯ ಮ್ಯೂಜಿಕ್ ಮಾಡಿದ ಸಿನಿಮಾಗಳು ಫ್ಲಾಪ್ ಆಗುತ್ತೆ ಅಂತ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದವು.
ಇಂದು ಅರ್ಜುನ್ ಜನ್ಯ ಜನ್ಮದಿನ ಅರ್ಜುನ್ ಜನ್ಯ ಅದೃಷ್ಟ ಖುಲಾಯಿಸೋಕೆ ಕಾರಣ ಸಾಹಿತಿ ಕೆ.ಕಲ್ಯಾಣ್. ಲೋಕೇಶ್ ಕುಮಾರ್ ಹೆಸರಿನ ಬದಲು ಅರ್ಜುನ್ ಅಂತಾ ಹೊಸ ಹೆಸರು ಇಟ್ಟು ನಾಮಕರಣ ಮಾಡಿದರು. ಅಲ್ಲಿಂದ ಲೋಕೇಶ್ ಹೆಸರು ಬಿಟ್ಟು, ಅರ್ಜುನ್ ಹೆಸರು ಇಟ್ಟುಕೊಂಡು ಬಿರುಗಾಳಿ ಸಿನಿಮಾಕ್ಕೆ ಸಂಗೀತ ನುಡಿಸಿದರು. ಈ ಚಿತ್ರದ ಪ್ರತಿಯೊಂದು ಹಾಡುಗಳು ಕನ್ನಡ ಚಿತ್ರರಂಗ ಅಲ್ಲದೇ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿ ಅರ್ಜುನ್ಗೆ ಸ್ವಲ್ಪ ಹೆಸರು ತಂದಿತು.
ಇಂದು ಅರ್ಜುನ್ ಜನ್ಯ ಜನ್ಮದಿನ ಈ ಚಿತ್ರದ ಬಳಿಕ ಅರ್ಜುನ್ ಕನ್ನಡ ಚಿತ್ರರಂಗದಲ್ಲಿ ರಾತ್ರೋರಾತ್ರಿ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿ ಹೊರಹೊಮ್ಮಿದರು. ಸುದೀಪ್ ನಟಿಸಿ, ನಿರ್ದೇಶನ ಮಾಡಿದ ಚಿತ್ರ ಕೆಂಪೇಗೌಡದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು. ಅರ್ಜುನ್ ಸಂಗೀತ ನಿರ್ದೇಶಕನ ಕರಿಯರ್ಗೆ ದೊಡ್ಡ ತಿರುವು ಸಿಕ್ಕಿತು.
ಇಂದು ಅರ್ಜುನ್ ಜನ್ಯ ಜನ್ಮದಿನ ಈ ಸಿನಿಮಾ ಸಕ್ಸಸ್ ಬಳಿಕ ಅರ್ಜುನ್ ಎಂಬ ಹೆಸರಿನ ಮುಂದೆ ಜನ್ಯ ಅಂತಾ ಸೇರಿತು. ಈ ಹೆಸರು ಕಿಚ್ಚ ಸುದೀಪ್ ಇಟ್ಟಿರುವುದು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಅಲ್ಲಿಂದ ಅರ್ಜುನ್ ಜನ್ಯ ಕಂಪೋಸ್ ಮಾಡಿದ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗೋದಕ್ಕೆ ಕಾರಣವಾಯಿತ್ತು. ಲಕ್ಕಿ, ಅಲೆಮಾರಿ, ರ್ಯಾಂಬೋ, ವರದನಾಯಕ, ವಿಕ್ಟರಿ, ಮುಕುಂದಾ ಮುರಾರಿ, ಅಧ್ಯಕ್ಷ , ಹೆಬ್ಬುಲಿ, ಅಯೋಗ್ಯ, ದಿ ವಿಲನ್, ಅಮರ್, ಪೈಲ್ವಾನ್, ಭರಾಟೆ, ಒಡೆಯ, ಹೀಗೆ 100ಕ್ಕೂ ಹೆಚ್ಚು ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಇಂದು ಅರ್ಜುನ್ ಜನ್ಯ ಜನ್ಮದಿನ ಓದಿ:ಜ್ಯೂ. ಎನ್ಟಿಆರ್ ಜೊತೆ ಪ್ರಶಾಂತ್ ನೀಲ್ ಚಿತ್ರ!
ಸಿನಿಮಾ ಜೊತೆಗೆ ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಅರ್ಜುನ್ ಜನ್ಯಗೆ 41ನೇ ಹುಟ್ಟುಹಬ್ಬ. ಸದ್ಯ ಪತ್ನಿ ಗೀತ ಹಾಗೂ ಒಂದು ಹೆಣ್ಣು ಮಗುವಿನ ಜೊತೆ ಅರ್ಜುನ್ ಜನ್ಯ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆ 41ನೇ ಹುಟ್ಟುಹಬ್ಬದ ಖುಷಿಯಲ್ಲಿರುವ ಅರ್ಜುನ್ ಜನ್ಯ ಈ ಬಾರಿ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಕಾರಣ ಪ್ರೀತಿಯ ಅಣ್ಣನ ಅಕಾಲಿಕ ಮರಣ ಅರ್ಜುನ್ ಜನ್ಯರನ್ನ ಕಾಡುತ್ತಿದೆ.