ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 'ದರ್ಬಾರ್' ಸಿನಿಮಾ ಇದೇ ಗುರುವಾರ, ಅಂದರೆ ಜನವರಿ 9 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಎ.ಆರ್. ಮುರುಗದಾಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
'ದರ್ಬಾರ್' ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ವಿರುದ್ಧ ಕನ್ನಡ ವಿತರಕರ ಪ್ರತಿಭಟನೆ - ಬಾಕಿ ಹಣ ನೀಡುವಂತೆ ಲೈಕಾ ಪ್ರೊಡಕ್ಷನ್ಗೆ ಕನ್ನಡ ವಿತರಕರ ಒತ್ತಾಯ
'ಲೈಕಾ' ಪ್ರೊಡಕ್ಷನ್, ಕನ್ನಡದ ವಿತರಕ ಎನ್. ಕುಮಾರ್ ಹಾಗೂ ವಿತರಕ ಸುಧೀರ್ ಅವರಿಗೆ 5 ಕೋಟಿ ರೂಪಾಯಿ ಬಾಕಿ ಹಣ ಕೊಡಬೇಕಿದ್ದು, ಹಣವನ್ನು ಉಳಿಸಿಕೊಂಡಿರುವುದಲ್ಲದೇ, ಚಿತ್ರದ ವಿತರಣೆ ಹಕ್ಕನ್ನು ಬೇರೆ ವಿತರಕರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಸಂಸ್ಥೆ ವಿರುದ್ಧ ಕನ್ನಡದ ವಿತರಕರು ಪ್ರತಿಭಟನೆ ಮಾಡುತ್ತಿದ್ದಾರೆ.
!['ದರ್ಬಾರ್' ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ವಿರುದ್ಧ ಕನ್ನಡ ವಿತರಕರ ಪ್ರತಿಭಟನೆ Kannada distributors protest](https://etvbharatimages.akamaized.net/etvbharat/prod-images/768-512-5612362-thumbnail-3x2-darbar.jpg)
'ದರ್ಬಾರ್' ಸಿನಿಮಾವನ್ನು ತೆಲುಗು ಹಾಗೂ ಹಿಂದಿಗೆ ಡಬ್ ಮಾಡಲಾಗಿದೆ. ಆದರೆ, ಕನ್ನಡದಲ್ಲಿ ಡಬ್ ಮಾಡದೇ ಕನ್ನಡವನ್ನು ನಿರಾಕರಿಸಲಾಗಿದೆ. ಒಂದು ವೇಳೆ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬೇಕು ಎಂದಾದಲ್ಲಿ ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡಲಿ ಎಂದು ಒಂದೆಡೆ ಕನ್ನಡ ಪರ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಲೈಕಾ ಪ್ರೊಡಕ್ಷನ್ ಸಂಸ್ಥೆ ವಿರುದ್ಧ ಕನ್ನಡದ ವಿತರಕರು ಪ್ರತಿಭಟನೆ ಮಾಡುತ್ತಿದ್ದಾರೆ. 'ಲೈಕಾ' ಪ್ರೊಡಕ್ಷನ್, ಕನ್ನಡದ ವಿತರಕ ಎನ್. ಕುಮಾರ್ ಹಾಗೂ ವಿತರಕ ಸುಧೀರ್ ಅವರಿಗೆ 5 ಕೋಟಿ ರೂಪಾಯಿ ಬಾಕಿ ಹಣ ಕೊಡಬೇಕಿದ್ದು, ಹಣವನ್ನು ಉಳಿಸಿಕೊಂಡಿರುವುದಲ್ಲದೆ, ಚಿತ್ರದ ವಿತರಣೆ ಹಕ್ಕನ್ನು ಬೇರೆ ವಿತರಕರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಬೆಳಗ್ಗೆ 10 ರಿಂದ ಸಂಜೆ 6 ವರೆಗೂ ಕೆಲವು ವಿತರಕರು ತಮ್ಮ ಕಚೇರಿಯನ್ನು ಬಂದ್ ಮಾಡಿ ಫಿಲ್ಮ್ ಚೇಂಬರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ವಿರುದ್ದ ಧಿಕ್ಕಾರ ಕೂಗಿ ವಿತರಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಲೈಕಾ ಪ್ರೊಡಕ್ಷನ್ ನಮ್ಮ ಹಣ ವಾಪಸ್ ಕೊಡಬೇಕು ಎಂದು ವಿತರಕರು ಆಗ್ರಹಿಸಿದ್ದಾರೆ. ಫಿಲ್ಮ್ ಚೇಂಬರ್ನಲ್ಲಿ ಈ ಸಂಬಂಧ ಸಂಘದ ಅಧ್ಯಕ್ಷ ಪ್ರವೀಣ್, ವಿತರಕ ಸಂಘದ ಅಧ್ಯಕ್ಷ ಐತಾಳ್ , ಫಿಲ್ಮ್ ಚೇಂಬರ್ ವಿತರಕ ವಲಯದ ಕಾರ್ಯದರ್ಶಿ ಎ.ಗಣೇಶ್ , ಸೇರಿದಂತೆ ಹಲವು ವಿತರಕರು ಸಭೆ ನಡೆಸಿದ್ದಾರೆ.