ಸ್ಯಾಂಡಲ್ವುಡ್ನಲ್ಲಿ ಭಿನ್ನ ವಿಭಿನ್ನ ಸಿನಿಮಾಗಳ ಟೈಟಲ್ ಹೊಂದಿರುವ ಚಿತ್ರಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಇದೀಗ ಹಾಸ್ಯ ನಟ ವೈಜನಾಥ್ ಬಿರಾದಾರ್ ನಟನೆಯ ಐನೂರನೇ ಚಿತ್ರ 'ನೈಂಟಿ ಹೊಡಿ ಮನೀಗ್ ನಡಿ' ಚಂದನವನದಲ್ಲಿ ಸದ್ದು ಮಾಡುತ್ತಿದೆ.
ಚಿತ್ರದ ಒಂದು ಹಾಡಿನ ಶೂಟಿಂಗ್ ಬೆಂಗಳೂರಿನ ಬಿಡದಿ ಸಮೀಪದ ಇನ್ನೋವೇಟಿವ್ ಫಿಲಂ ಸಿಟಿಯ ಅದ್ಧೂರಿ ಸೆಟ್ನಲ್ಲಿ ನಡೆಯುತ್ತಿದೆ. 25ರ ವಯಸ್ಸಿನ ನಟಿ ನೀತಾ ಜೊತೆ 70ರ ಬಿರಾದಾರ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ಬಿರಾದಾರ್ ನೀತಾ ಜೊತೆ ಹೆಜ್ಜೆ ಹಾಕಿದ್ದಾರೆ. ಫಿಲಂ ಸಿಟಿಯಲ್ಲಿ ಇತ್ತೀಚೆಗೆ ಚಿತ್ರೀಕರಣಗೊಂಡ ಸಿಂಗಲ್ ಕಣ್ಣಿನ ಹಾಡಿಗೆ ಚುಟು-ಚುಟು ಖ್ಯಾತಿಯ ಸಾಹಿತಿ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ.
ಹಾಡಿಗೆ ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಹಿನ್ನೆಲೆಯಲ್ಲಿ ಧ್ವನಿಯಾಗಿದ್ದು, ನೃತ್ಯ ನಿರ್ದೇಶಕ ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ. ಬಿರಾದಾರ್, ನೀತಾ ಅಲ್ಲದೇ ಹಿರಿಯ ನಟ ಕರಿಸುಬ್ಬು, ಮಾಣಿಕ್ಯ ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ ಅಂತಿದ್ದಾರೆ ಬಿರಾದಾರ್ ಚಿತ್ರಕ್ಕೆ ಇಬ್ಬರು ನಿರ್ದೇಶಕರಿದ್ದು, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಜಾ ರಮೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ ರತ್ನಮಾಲಾ ಬಾದರದಿನ್ನಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ ಅಂತಿದ್ದಾರೆ ಬಿರಾದಾರ್