ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಯಾವುದೇ ಪ್ರತಿಭಟನೆ, ರ‍್ಯಾಲಿ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ 'ಸಲಗ' ಮತ್ತು 'ಕೋಟಿಗೊಬ್ಬ-3' ಚಿತ್ರಗಳ ಪ್ರೀ-ರಿಲೀಸ್ ಇವೆಂಟ್‍ಗಳು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಸಲಗ ಮತ್ತು ಕೋಟಿಗೊಬ್ಬ-3 ಚಿತ್ರಗಳು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಚಿತ್ರದ ಭರ್ಜರಿ ಪ್ರಚಾರ ಮಾಡುವುದಕ್ಕೆ ಎರಡೂ ಚಿತ್ರತಂಡಗಳು ಪ್ರೀ-ರಿಲೀಸ್ ಇವೆಂಟ್‍ಗಳನ್ನು ಹಮ್ಮಿಕೊಂಡಿವೆ. ಸಲಗ' ಚಿತ್ರದ ಪ್ರೀ-ರಿಲೀಸ್ ಇವೆಂಟ್ ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ ನಡೆದರೆ, ಕೋಟಿಗೊಬ್ಬ 3 ಚಿತ್ರದ ಪ್ರೀ - ರಿಲೀಸ್ ಇವೆಂಟ್ ಚಿತ್ರದುರ್ಗದಲ್ಲಿ ನಡೆಯಲಿದೆ. ಇದೀಗ ಯಾವುದೇ ಸಮಾರಂಭದಲ್ಲೂ 500ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಮತ್ತು ಜಾತ್ರೆ, ರ‍್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿರುವುದರಿಂದ, ಈ ಎರಡೂ ಕಾರ್ಯಕ್ರಮಗಳು ನಡೆಯುತ್ತವಾ ಎಂಬ ಪ್ರಶ್ನೆ ಸಿನಿ ವಲಯದಲ್ಲಿ ಮೂಡಿದೆ.