ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಅಂಗವಾಗಿ ಇಡೀ ದೇಶವೇ ಬಾಪೂಜಿಯವರ ಸ್ಮರಣೆ ಮಾಡುತ್ತಿದೆ. ವಿಶೇಷವಾಗಿ ಈಟಿವಿ ಭಾರತ ಪ್ರಸಾರ ಮಾಡಿರುವ ಗಾಂಧೀಜಿಯವರ ನೆಚ್ಚಿನ ಹಾಡು ವೈಷ್ಣವ ಜನತೋ ಹಾಡಿಗೆ ಸಿನಿಮಾ ನಿರ್ದೇಶಕರು, ನಟರು ಫಿದಾ ಆಗಿದ್ದಾರೆ.
ಈ ಹಾಡನ್ನು ಪ್ರಖ್ಯಾತ ಗಾಯಕರಿಂದ ಹಾಡಿಸುವ ಮೂಲಕ ವಿಶಿಷ್ಟವಾಗಿ ಗಾಂಧೀಜಿ ಅವರನ್ನು ಸ್ಮರಣೆ ಮಾಡಲಾಯಿತು. ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಾವಿರಾರು ಗಣ್ಯರು ಈ ಹಾಡನ್ನ ಮೆಚ್ಚಿಸಿದ್ದಾರೆ.
ಅಲ್ಲದೇ ಸಿನಿಮಾ ತಾರೆಯರಾದ ನಟ ಶರಣ್, ನೀನಾಸಂ ಸತೀಶ್, ಖ್ಯಾತ ನಿರ್ದೇಶಕ ಮತ್ತು ಲಿರಿಕ್ ರೈಟರ್ ಯೋಗರಾಜ್ ಭಟ್ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯೋಗ್ರಾಜ್ ಭಟ್, ಒಂದು ಸರಳ ಸುಂದರ ಅದ್ಭುತ ಪ್ರಯತ್ನವಿದು, ಪ್ರತಿ ಕಲಾವಿದರಿಗೂ ಕೇಳುಗರಿಗೂ ಶುಭ ಹಾರೈಕೆಗಳು ಎಂದಿದ್ದಾರೆ. ಇನ್ನು ಈ ಬಗ್ಗೆ ಬರೆದಿರುವ ನೀನಾಸಂ ಸತೀಶ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಈಟಿವಿ ಭಾರತ ಒಂದು ವಿಭಿನ್ನ ಪ್ರಯತ್ನದೊಂದಿಗೆ ಶಾಂತಿದೂತನಿಗೆ ನಮನ ಸಲ್ಲಿಸಿದೆ. ರಾಷ್ಟ್ರಪಿತನ 150ನೇ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಿದ ಈಟಿವಿ ಭಾರತಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.
ಅದ್ರಲ್ಲಿ ಶರಣ್ ಮಾತ್ರ ಹಾಡಿನ ವಿಶೇಷತೆ ಜೊತೆಗೆ ಅದ್ದೂರಿಯಾಗಿ ಚಿತ್ರೀಕರಣ ಮಾಡಿರೋ ಬಗ್ಗೆ ಇಡೀ ಈಟಿವಿ ಭಾರತ ಸಂಸ್ಥೆಗೆ ವಿಶೇಷ ಧನ್ಯವಾದ ಹೇಳಿದ್ದಾರೆ.