ಕೊರೊನಾ ಕಾರಣದಿಂದ ತಡವಾಗಿದ್ದ ಕನ್ನಡ ಬಿಗ್ ಬಾಸ್ ಸೀಸನ್ 8 ಇದೇ ಫೆಬ್ರವರಿಯಿಂದ ಶುರುವಾಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ.
ಕೊನೆಗೂ ಅನೌನ್ಸ್ ಆಯ್ತು ಬಿಗ್ ಬಾಸ್ ಆರಂಭದ ದಿನ! - ಪರಮೇಶ್ವರ್ ಗುಂಡ್ಕಲ್
ಕನ್ನಡ ಬಿಗ್ ಬಾಸ್ ಸೀಸನ್ 8 ಇದೇ ಫೆಬ್ರವರಿಯಿಂದ ಶುರುವಾಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ.

ಕೊನೆಗೂ ಅನೌನ್ಸ್ ಆಯ್ತು ಬಿಗ್ ಬಾಸ್ ಆರಂಭದ ದಿನ!
ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಫೋಟೋ ಹಾಕಿ ಬರೆದುಕೊಂಡಿರುವ ಪರಮೇಶ್ವರ್, ಕನ್ನಡದ ಬಿಗ್ ಬಾಸ್ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಬಿಸ್ ಬಾಸ್ ಪ್ರಾರಂಭಕ್ಕೆ ಹಲವಾರು ಸಿದ್ಧತೆಗಳು ನಡೆಯುತ್ತಿದ್ದು, ಇಂದಿನಿಂದ ಪ್ರೋಮೋ ಶೂಟಿಂಗ್ ಕೂಡ ಶುರುವಾಗಿದೆ. ಶೂಟಿಂಗ್ನಲ್ಲಿ ಸುದೀಪ್ ಕೂಡ ಭಾಗಿಯಾಗಿದ್ದು, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.