ಕನ್ನಡದ ಬಿಗ್ಬಾಸ್ ಯಾವಾಗ ಶುರುವಾಗುತ್ತೆ ಎಂದು ಕಾದು ಕುಳಿತಿರುವ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.
ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಫೋಟೋವೊಂದನ್ನು ಶೇರ್ ಮಾಡಿ 'ಬಿಗ್ ಬಾಸ್ ಪ್ರೋಮೋ ಶೂಟಿಂಗ್' ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಫೋಟೋವನ್ನು ಸುದೀಪ್ ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಬಿಗ್ ಬಾಸ್ ಟೀ ಕಪ್ ಹಿಡಿದುಕೊಂಡು ಸ್ಟೈಲಿಶ್ ಆಗಿ ಅವರು ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಎರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಹರಿದಾಡುವ ಮಾಹಿತಿ ಪ್ರಕಾರ, ಬಿಗ್ ಬಾಸ್ 8 ಮಾರ್ಚ್ ತಿಂಗಳಿಂದ ಆರಂಭವಾಗಲಿದೆ ಎನ್ನಲಾಗುತ್ತಿದೆ. ದೊಡ್ಡಮನೆಗೆ ಯಾರೆಲ್ಲ ಹೋಗ್ತಾರೆ ಎಂಬುದು ಕುತೂಹಲ ಕೆರಳಿಸಿದೆ.