ಕರ್ನಾಟಕ

karnataka

ETV Bharat / sitara

ಈ ವಾರ ಬಿಗ್‌ಬಾಸ್​​ ಮನೆಯಿಂದ ಕಿಶನ್​ ಔಟ್.. ಪ್ರಿಯಾಂಕಾಗೆ ಸಿಕ್ತು ಕಿಚ್ಚನಿಂದ ಗಿಫ್ಟ್​​​​! - ಕನ್ನಡದ ಬಿಗ್​ ಬಾಸ್​​

ಬಿಗ್‌ಬಾಸ್​​ನಲ್ಲಿ ಈ ವಾರದ ಕಿಚ್ಚನ ಚಪ್ಪಾಳೆ ಪ್ರಿಯಾಂಕಾಗೆ ಸಿಕ್ಕಿದೆ. ಎಲಿಮಿನೇಷನ್​ ವಿಚಾರ ನೋಡುವುದಾದ್ರೆ ಈ ವಾರ ಬಿಗ್‌ಬಾಸ್​ ಮನೆಯಿಂದ  ಕಿಶನ್​ ಔಟ್​ ಆಗಿದ್ದಾರೆ.

kannada big boss : kishan out from big boss house
ಈ ವಾರ ಬಿಗ್​ ಬಾಸ್​​ ಮನೆಯಿಂದ ಕಿಶನ್​ ಔಟ್​ : ಪ್ರಿಯಾಂಕಾಗೆ ಸಿಕ್ತು ಕಿಚ್ಚನಿಂದ ಗಿಫ್ಟ್​​​​!

By

Published : Jan 19, 2020, 12:38 PM IST

ಕೇವಲ ಇನ್ನೆರಡು ವಾರ ಉಳಿದಿರುವ ಕನ್ನಡದ ಬಿಗ್​ ಪ್ರೇಕ್ಷಕರಿಗೆ ಕುತೂಹಲದ ಆಗರವಾಗಿದೆ. ಅದ್ರಲ್ಲೂ ಇತ್ತೀಚೆಗೆ ನಡೆಯುತ್ತಿರುವ ಟಾಸ್ಕ್​​ಗಳು ಕೂಡ ಬಿಗ್​ ಬಾಸ್​​​​ ಸ್ಪರ್ಧಿಗಳಿಗೆ ಒತ್ತಡದ ಮೇಲೆ ಒತ್ತಡ ತರುತ್ತಿವೆ.

ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಒಳ್ಳೊಳ್ಳೆ ಸುದ್ದಿ ಸಿಕ್ಕಿವೆ. ಮೊದಲನೆಯದಾಗಿ ನೋಡೋದಾದ್ರೆ, ಈ ವಾರದ ಕಿಚ್ಚನ ಚಪ್ಪಾಳೆ ಪ್ರಿಯಾಂಕಾಗೆ ಸಿಕ್ಕಿದೆ.

ಈ ವಾರದ ಕಿಚ್ಚನ ಚಪ್ಪಾಳೆ ಒಂಚೂರು ವಿಶೇಷವಾಗಿತ್ತು. ಯಾಕಂದ್ರೆ, ಯಾರು ಕಿಚ್ಚನ ಚಪ್ಪಾಳೆ ಪಡೆಯುತ್ತಾರೋ ಅವರಿಗೆ ಸುದೀಪನಿಂದ ಒಂದು ಸರ್ಪ್ರೈಸ್​ ಗಿಫ್ಟ್​​ ಸಿಗಲಿದೆ ಎಂದು ಈ ಹಿಂದಿನ ಸಂಚಿಕೆಯಲ್ಲಿ ಹೇಳಲಾಗಿತ್ತು. ಅದ್ರಂತೆ ಈ ವಾರದ ಕಿಚ್ಚನ ಚಪ್ಪಾಳೆ ಜೊತೆ ಕಿಚ್ಚನ ಜಾಕೆಟ್​ ಕೂಡ ಪ್ರಿಯಾಂಕಾಗೆ ಸಿಕ್ಕಿದೆ. ಎಲಿಮಿನೇಷನ್​ ವಿಚಾರ ನೋಡುವುದಾದ್ರೆ ಈ ವಾರ ಬಿಗ್‌ಬಾಸ್​ ಮನೆಯಿಂದ ಕಿಶನ್​ ಔಟ್​ ಆಗಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಕಿಶನ್​ ಬಿಗ್‌ಬಾಸ್​ ಮನೆಯಿಂದ ಬಿಗ್‌ಬಾಸ್​ ವೇದಿಕೆಗೆ ಹೋದಾಗ ಅಲ್ಲಿ ಕಿಚ್ಚನಿಂದ ಒಂದು ಜಾಕೆಟ್​ ಕೂಡ ಸಿಕ್ಕಿದೆ.

ABOUT THE AUTHOR

...view details