ಈ ಕಾಲದಲ್ಲಿ ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳೇ ಫ್ಲಾಪ್ ಆಗ್ತಿವೆ. ಆದ್ರೆ ಇಲ್ಲೊಂದು ಸಿನಿಮಾ ಚಿತ್ರಮಂದಿರಕ್ಕೆ ಬರದೆ ಯಶಸ್ವಿ ಪ್ರದರ್ಶನ ಕಂಡಿದೆ.
ಕನ್ನಡ ಚಿತ್ರರಂಗದಲ್ಲಿ 2019ರಲ್ಲಿ ಶುರುವಾದ ಹೊಸ ಬೆಳವಣಿಗೆ ಇದು. 'ಭಿನ್ನ' ಎಂಬ ಕನ್ನಡ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡದೆ, ಜೀ5 ಎಂಬ ಅಪ್ಲಿಕೇಶನ್ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಆದರ್ಶ್ ಈಶ್ವರಪ್ಪ ನಿರ್ದೇಶನ ಮಾಡಿದ್ದು, ಕಳೆದ ಅಕ್ಟೋಬರ್ 8ರಂದು ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿದೆ.
ಕನ್ನಡ ಚಿತ್ರ ‘ಭಿನ್ನ’ ಯಾವ ರೀತಿ ಜನರ ಮೆಚ್ಚುಗೆ ಪಡೆದುಕೊಂಡಿದೆ ಎಂದು ಜೀ5 ದಕ್ಷಿಣ ಭಾರತದ ಮುಖ್ಯಸ್ಥ ಕಿಶೋರ್ ಆಚಾರ್ಯ ಅವರನ್ನು ಸಂಪರ್ಕಿಸಲಾಯಿತು. ಅವರ ಪ್ರಕಾರ ಜೀ5 190 ದೇಶಗಳಲ್ಲಿ ಹರಡಿಕೊಂಡಿದ್ದು, ಈ ಕನ್ನಡ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದರು. ಆದ್ರೆ ಎಷ್ಟು ಜನ ನೋಡಿದ್ದಾರೆ. ಎಷ್ಟು ಹಣ ಪಡೆಯಿತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಡಿಜಿಟಲ್ ಕ್ರಾಂತಿ ಈಗಾಗಲೇ ಹಬ್ಬಿದೆ. ಮುಂದಿನ ದಿವಸಗಳಲ್ಲಿ ಅದು ದೊಡ್ಡಮಟ್ಟದ ಯಶಸ್ಸು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಅತ್ಯುತ್ತಮ ತಂತ್ರಜ್ಞಾನದಿಂದ ಈ ಸಿನಿಮಾವನ್ನು ಮಾಡಲಾಗಿದ್ದು, ದೇಶ-ವಿದೇಶದಲ್ಲೂ ಹೆಸರು ಮಾಡಿದೆ. ಜೀ5 ಸಂಸ್ಥೆ ಈಗಾಗಲೇ ಹಲವಾರು ಕನ್ನಡ ಸಿನಿಮಾಗಳ ಜೊತೆ ಸಂಪರ್ಕ ಹೊಂದಿದ್ದು, ಮುಂದಿನ ದಿವಸಗಳಲ್ಲಿ ಮತ್ತಷ್ಟು ಬೆಳೆಯಲಿದೆ ಎನ್ನುತ್ತಾರೆ ಕಿಶೋರ್ ಆಚಾರ್ಯ.