ಕರ್ನಾಟಕ

karnataka

By

Published : Sep 8, 2020, 3:32 PM IST

ETV Bharat / sitara

ತೆಲುಗು ಚಿತ್ರಕ್ಕೆ ಕನ್ನಡ ಕಲಾವಿದರು, ತಂತ್ರಜ್ಞರನ್ನು ಕರೆತಂದ ನಿರ್ದೇಶಕ ದಯಾಳ್ ಪದ್ಮನಾಭನ್

ರಾಜ್ಯ ಪ್ರಶಸ್ತಿ ಪಡೆದ 'ಆ ಕರಾಳ ರಾತ್ರಿ' ಇದೀಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು ಈ ಚಿತ್ರವನ್ನೂ ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಅಲ್ಲು ಅರವಿಂದ್ ನಿರ್ಮಿಸುತ್ತಿದ್ದು ಸೆಪ್ಟೆಂಬರ್ 20 ರಿಂದ ಚಿತ್ರೀಕರಣ ಆರಂಭವಾಗಲಿದೆ.

Kannada artist and technicians i
ದಯಾಳ್ ಪದ್ಮನಾಭನ್

ನಿರ್ದೇಶಕ ದಯಾಳ್ ಪದ್ಮನಾಭನ್ ಡಬಲ್ ಖುಷಿಯಲ್ಲಿದ್ದಾರೆ. ಅವರ 18ನೇ ಸಿನಿಮಾ ಒಂಭತ್ತನೇ ದಿಕ್ಕು ಶೀಘ್ರದಲ್ಲೇ ಬಿಡುಗಡೆಗೆ ತಯಾರಾಗಿದೆ. ಜೊತೆಗೆ ಮೊದಲ ಬಾರಿಗೆ ತೆಲುಗು ಚಿತ್ರವನ್ನು ನಿರ್ದೇಶಿಸುವ ಮೂಲಕ ಟಾಲಿವುಡ್​​ಗೂ ಕಾಲಿಟ್ಟಿದ್ದಾರೆ.

'ಆ ಕರಾಳ ರಾತ್ರಿ'

ಬಿಗ್​ಬಾಸ್​​ಗೆ ಹೋಗಿ ಬಂದಾಗಿನಿಂದ ಬಹಳ ಬ್ಯುಸಿ ಆಗಿದ್ದಾರೆ ದಯಾಳ್ ಪದ್ಮನಾಭನ್. 17 ವರ್ಷಗಳ ಸಿನಿಪಯಣದಲ್ಲಿ ಸುಮಾರು 18 ಚಿತ್ರಗಳನ್ನು ನಿರ್ದೇಶಿಸಿ 8 ಸಿನಿಮಾಗಳನ್ನು ನಿರ್ಮಿಸಿ ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ದಯಾಳ್ ಪದ್ಮನಾಭನ್​ಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ 'ಆ ಕರಾಳ ರಾತ್ರಿ' ತೆಲುಗಿಗೆ ರೀಮೇಕ್ ಆಗುತ್ತಿದೆ. ಅಲ್ಲು ಅರವಿಂದ್ ಅವರು ತಮ್ಮ ಗೀತಾ ಆರ್ಟ್ಸ್​ ಬ್ಯಾನರ್ ಮೂಲಕ ದಯಾಳ್ ಅವರನ್ನು ತೆಲುಗು ರೀಮೇಕ್ ಮಾಡಲು ಆಹ್ವಾನಿಸಿದ್ದಾರೆ.

ನವೀನ್ ಕೃಷ್ಣ

ಈ ತೆಲುಗು ಚಿತ್ರದಲ್ಲಿ ಪ್ರಮುಖ ಸಹ ನಿರ್ದೇಶಕ ಆಗಿ ನವೀನ್ ಕೃಷ್ಣ ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಿನಿಮಾದಲ್ಲಿ ಭವಿಷ್ಯ ಹೇಳುವ ಪಾತ್ರವನ್ನು ನವೀನ್ ಕೃಷ್ಣ ತೆಲುಗು ಚಿತ್ರದಲ್ಲೂ ಮಾಡುತ್ತಿದ್ದಾರೆ. ಇವರೊಂದಿಗೆ ಛಾಯಾಗ್ರಾಹಕ ಆಗಿ ರಾಕೇಶ್, ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ವೀಣಾ ಸುಂದರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಂಕಲನಕಾರರನ್ನಾಗಿ ಪ್ರೀತಿ-ಬಾಬು ಅವರನ್ನು ದಯಾಳ್ ಪದ್ಮನಾಭನ್ ಆಯ್ಕೆ ಮಾಡಿಕೊಂಡಿದ್ದಾರೆ.

ವೀಣಾ ಸುಂದರ್

ಅರ್ಹ ಮೀಡಿಯಾ ಹಾಗೂ ಟ್ರೆಂಡ್ ಲೌಡ್​ ಜೊತೆ ಸೇರಿ ಅಲ್ಲು ಅರವಿಂದ್ ನಿರ್ಮಿಸುತ್ತಿರುವ ಈ ಚಿತ್ರ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ತೆಲುಗು ರೀಮೇಕ್ ನಂತರ ತಮಿಳು ಭಾಷೆಗೆ ಕೂಡಾ ಈ ಚಿತ್ರವನ್ನು ನಿರ್ದೇಶಿಸುತ್ತಾರಂತೆ ದಯಾಳ್ ಪದ್ಮನಾಭನ್. ರೆಡ್ ಕಾರ್ಪೆಟ್ ರಮೇಶ್ ಪಿಳ್ಳೈ ತಮಿಳು ಭಾಷೆಯಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ಮಣಿಕಾಂತ್ ಕದ್ರಿ

ABOUT THE AUTHOR

...view details