ಕರ್ನಾಟಕ

karnataka

ETV Bharat / sitara

'ದೇವ್ರಾಣೆಗೂ ನಮ್ಮದು ರಿಮೇಕ್ ಚಿತ್ರವ​ಲ್ಲ' - ಪ್ರಜ್ವಲ್ ದೇವರಾಜ್

ತಮ್ಮ 'ಅರ್ಜುನ್ ಗೌಡ' ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಎನ್ನುವ ರೂಮರ್​​ನ್ನು ನವ ನಿರ್ದೇಶ ಶಂಕರ್ ಅಲ್ಲಗಳೆದಿದ್ದಾರೆ.

ಅರ್ಜುನ್ ಗೌಡ

By

Published : Aug 3, 2019, 6:01 PM IST

ನಿನ್ನೆ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಮಾತನಾಡಿರುವ ನಿರ್ದೇಶಕ ಶಂಕರ್, ದೇವ್ರಾಣೆಗೂ ಇದು ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್​ ಅಲ್ಲ, ಅದರ ಸ್ಪೂರ್ತಿಯೂ ನಮ್ಮ ಚಿತ್ರಕ್ಕಿಲ್ಲ. ಇದು ಸ್ವಂತ ಕಥೆ. ಅಪ್ಪಟ ಕನ್ನಡ ಸಿನಿಮಾ ಎಂದು ಸ್ಪಷ್ಟನೆ ನೀಡಿದ್ರು.

ಅರ್ಜುನ್ ಗೌಡ ಆ್ಯಕ್ಷನ್ ಹಾಗೂ ಲವ್ ಸ್ಟೋರಿಯ ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್​​ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು. ಒಂದು ಪಾತ್ರ ರೆಬೆಲ್ ಆಗಿ ಮಾಡಿದ್ದೇನೆ. ಸಂಗೀತ ನಿರ್ದೇಶಕ ಧರ್ಮವಿಶ್ ಒಳ್ಳೆಯ ಟ್ಯೂನ್ಸ್​ ಕಂಪೋಸ್ ಮಾಡಿದ್ದಾರೆ. ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ನಾನು ಮಸ್ತ್​​ ಡ್ಯಾನ್ಸ್ ಮಾಡಿದ್ದೇನೆ. ಈ ಚಿತ್ರದಲ್ಲಿ ರಗಡ್ ಪಾತ್ರದಲ್ಲಿ ಕಾಣಿಸಿದ್ದು ನನ್ನ ಸಾಗರ ಹಾಗೂ ಗುಲಾಮ ಚಿತ್ರಕ್ಕಿಂತ ಹೆಚ್ಚು ಎಂಟರ್ಟೈನ್‌ಮೆಂಟ್‌ ನಿರೀಕ್ಷಿಸಬಹುದು ಎಂದರು.

ಅರ್ಜುನ್ ಗೌಡ ಚಿತ್ರದ ಮಾಧ್ಯಮಗೋಷ್ಟಿ

ಚಿತ್ರದಲ್ಲಿ ಪ್ರಜ್ವಲ್​​​ಗೆ ನಾಯಕಿಯಾಗಿ ನಟಿಸಿರುವ ಪ್ರಿಯಾಂಕಾ ತಿಮ್ಮೇಶ್ ಮಾತನಾಡಿ, ಈ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ನಿರ್ದೇಶಕರು ಕತೆ ಹೇಳುವಾಗಲೇ ಈ ಪಾತ್ರದ ಬಗ್ಗೆ ವಿವರಿಸಿದ್ದರು. ಕೆಲವು ಕಿಸ್​​ಗಳನ್ನು ಬೋಲ್ಡ್ ಆಗಿಯೇ ಮಾಡಿದ್ದೇನೆ. ತುಂಬ ಅಚ್ಚುಕಟ್ಟಾಗಿ ಪಾತ್ರ ಮೂಡಿಬಂದಿದೆ ಎಂದರು.

ಈ ಚಿತ್ರದಲ್ಲಿ ಸಾಧುಕೋಕಿಲಾ, ಸ್ಪರ್ಶ ಖ್ಯಾತಿಯ ರೇಖಾ, ಕಡ್ಡಿಪುಡಿ ಚಂದ್ರು, ಯಮುನಾ ಶ್ರೀನಿಧಿ, ಭಜರಂಗಿ ಚೇತನ್ ಜೀವ ಸೂರಜ್ ದಿನೇಶ್ ಮಂಗಳೂರು ಹನುಮಂತೇಗೌಡ ಸೇರಿದಂತೆ ದೊಡ್ಡ ತಾರಾ ಬಳಗ ಇದೆ. ರಾಮು ನಿರ್ಮಾಣದ ಈ ಸಿನಿಮಾ ದಸರಾ ಹೊತ್ತಿಗೆ ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ABOUT THE AUTHOR

...view details