ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಚೆಂದುಳ್ಳಿ ಚೆಲುವೆಯರು ಬೆಳ್ಳಿ ತೆರೆ ಮೇಲೆ ನಕ್ಷತ್ರಗಳಂತೆ ಮಿಂಚುತ್ತಿದ್ದಾರೆ. ಆದರೆ, ಈ ನಟಿಮಣಿಯರ ಈ ಸಕ್ಸಸ್ ಹಿಂದೆ ಒಂದು ಶಕ್ತಿ ಇದೆ. ಅಷ್ಟಕ್ಕೂ ಸ್ಯಾಂಡಲ್ವುಡ್ನ ಕೆಲ ನಟಿಯರ ಸ್ಟ್ರೆಂಥ್ ಏನು ಅಂತಾ ಗೊತ್ತಾದ್ರೆ ಎಲ್ಲರಿಗೂ ಆಶ್ಚರ್ಯ ಆಗೋದು ಗ್ಯಾರಂಟಿ..
ಸ್ಯಾಂಡಲ್ವುಡ್ನಲ್ಲಿ ಸುಂಟರಗಾಳಿ ನಟಿ ಅಂತಾ ಕರೆಯಿಸಿಕೊಂಡವರಲ್ಲಿ ರಕ್ಷಿತಾ ಕನ್ನಡ, ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದು, ಅವ್ರ ಯಶಸ್ಸಿನ ಹಿಂದಿರುವ ಶಕ್ತಿ ಅಂದ್ರೆ ಅವ್ರ ತಾಯಿ ಮಮತಾ ರಾವ್. ಈಗ ರಕ್ಷಿತಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳೋದಕ್ಕೆ ಮಗಳ ಬ್ಯಾಕ್‌ಬೋನ್ ಆಗಿ ನಿಂತವರು ಅವ್ರ ಅಮ್ಮ.
ರಕ್ಷಿತಾ ನಂತರ ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಯಿಸಿದ ನಟಿ ಮೋಹಕ ತಾರೆ ರಮ್ಯಾ. ಸ್ಯಾಂಡಲ್ವುಡ್ ಕ್ವೀನ್ ಆಗಿ ಮಿಂಚಿದ ರಮ್ಯಾರ ದೊಡ್ಡ ಶಕ್ತಿ ಅಂದ್ರೆ ಅವ್ರ ತಾಯಿ ರಂಜಿತಾ ಅನ್ನೋದು. ಸಿನಿಮಾದಲ್ಲಿ ರಮ್ಯಾ ಬೆಳೆಯುವ ಸಂದರ್ಭದಲ್ಲಿ ಮಗಳ ಬೆಳವಣಿಗೆಯಲ್ಲಿ, ರಂಜಿತಾ ಅವ್ರ ಸಲಹೆ, ಸೂಚನೆ ನೀಡುತ್ತಿದ್ರು. ರಮ್ಯಾ ರಾಜಕೀಯಕ್ಕೆ ಬಂದ ದಿನಗಳಲ್ಲಿ ರಂಜಿತಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ರಮ್ಯಾ ಅವರ ಸಪೋರ್ಟ್ಗೆ ನಿಂತಿದ್ರು.
ಸ್ಯಾಂಡಲ್ವುಡ್ನಲ್ಲಿ ಸಿಂಡ್ರೆಲ್ಲಾ ಅಂತಾ ಕರೆಯಿಸಿಕೊಂಡಿರುವ ನಟಿ ರಾಧಿಕಾ ಪಂಡಿತ್. ಕನ್ನಡದಲ್ಲಿ ಲಕ್ಕಿ ಹೀರೋಯಿನ್ ಆಗಿ ಹೊರ ಹೊಮ್ಮಿದ ರಾಧಿಕಾ ಪಂಡಿತ್, ಸಿನಿಮಾ ಸಕ್ಸಸ್ನ ಪ್ರತಿ ಹೆಜ್ಜೆಯಲ್ಲಿ ಜೊತೆಯಾದವರು ಅವ್ರ ಮುದ್ದಿನ ತಾಯಿ ಮಂಗಳಾ ಪಂಡಿತ್. ಈ ಮಾತನ್ನು ಸ್ವತಃ ರಾಧಿಕಾ ಪಂಡಿತ್ ಒಪ್ಪಿಕೊಂಡಿದ್ದಾರೆ. ಚಿಕ್ಕ ಸಮಸ್ಯೆಯಾದರು ಅಲ್ಲಿ ಅಮ್ಮ ಬೇಕು ಅಂತಾ ಸಾಕಷ್ಟು ಬಾರಿ ಅನಿಸಿದೆಯಂತೆ.
ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ಮಲೆನಾಡಿನ ಕುವರಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಸಿನಿಮಾ ಹಾಗೂ ಪರ್ಸನಲ್ ವಿಚಾರದಲ್ಲಿ ಮಗಳ ಬ್ಯಾಕ್ ಬೋನ್ ಆಗಿ ನಿಂತವರು ಅವ್ರ ತಾಯಿ ಸುಮನ್ ಮಂದಣ್ಣ.. ಮಗಳ ಯಾವುದೇ ನಿರ್ಧಾರದಲ್ಲಿ ಅವ್ರ ತಾಯಿ ಸುಮನ್ ಅವ್ರ ಸಲಹೆ, ಮಾರ್ಗದರ್ಶನ ಹೆಚ್ಚಾಗಿ ಇರುತ್ತೆ ಅನ್ನುವುದಕ್ಕೆ ರಶ್ಮಿಕಾ ಸಕ್ಸಸ್ ಕಾರಣ.