ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಲಕ್ಷ್ಮಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅವರು ಇಂದು ಸೆಲ್ಫಿ ವಿಡಿಯೋ ಮೂಲಕ ಕನ್ನಡ ಚಿತ್ರರಂಗದವರ ಮುಂದೆ ತಮ್ಮ ಗೋಳು ಹೇಳಿಕೊಂಡಿದ್ದಾರೆ. ಸುದೀಪ್ ಅವರನ್ನು ಬಿಟ್ರೆ ನನ್ನ ಮೇಲೆ ಯಾರಿಗೂ ಕರುಣೆ ಇಲ್ವ ? ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ಯಾರೂ ಇವರಾರು ನನ್ನಮಾತಾಡಿಸ್ತಿಲ್ಲ. ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಹಾಗೂ ಪಾರ್ವತಮ್ಮ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರಿದ್ದರೆ ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ. ಅವರಿಲ್ಲದೆ ನಾನು ಅನಾಥೆಯಾಗಿದ್ದೇನೆ ಎಂದು ವಿಜಯಲಕ್ಷ್ಮಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸುದೀಪ್ ಹೊರತುಪಡಿಸಿ ಯಾರಿಗೂ ನನ್ನ ಮೇಲೆ ಕರುಣೆ ಇಲ್ವಾ ? ...ಮತ್ತೇ ಕಣ್ಣೀರು ಹಾಕಿದ ನಟಿ ವಿಜಯಲಕ್ಷ್ಮಿ - ನಟಿ ವಿಜಯಲಕ್ಷ್ಮಿ
ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತೆ ಕಣ್ಣೀರಿಟ್ಟಿದ್ದಾರೆ. ಸುದೀಪ್ ಅವರನ್ನು ಬಿಟ್ಟು ನನ್ನ ಮೇಲೆ ಯಾರೂ ಕರುಣೆ ತೋರುತ್ತಿಲ್ಲ ಎಂದು ಹಲುಬುತ್ತಿದ್ದಾರೆ.
ಇಂಡಸ್ಟ್ರಿಯಲ್ಲಿ ಸುದೀಪ್ ಸರ್ ಬಿಟ್ಟು ಬೇರೆ ಯಾರಿಗೂ ಯಾಕೆ ಕರುಣೆ ಬಂದಿಲ್ಲ. ನಾನು ಏನ್ ತಪ್ಪು ಮಾಡಿದ್ದೀನಿ. ಯಾಕೆ ಎಷ್ಟು ಶಿಕ್ಷೆ ಕೊಡುತ್ತಿದ್ದೀರಿ ಎಂದು ದಯನೀಯವಾಗಿ ಕೇಳಿಕೊಂಡಿದ್ದಾರೆ. ಈ ಮಧ್ಯೆ ನನ್ನ ಮನಸ್ಸಿನಲ್ಲಿ ಒಂದು ಚಿಕ್ಕ ಕೊರಗು ಇದೆ. ನಾನಿರುವ ಪರಿಸ್ಥಿತಿಯಲ್ಲಿ ಶೀಘ್ರವೇ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ನನ್ನ ಬಳಿ ಇರುವುದಕ್ಕೆ ಮನೆಯಿಲ್ಲ. ಬಾಡಿಗೆ ಮನೆಗೆ ಹೋಗೋಣ ಎಂದರೆ ಅಡ್ವಾನ್ಸ್ ಕೊಡುವುದಕ್ಕೂ ಹಣವಿಲ್ಲ. ಈ ಬಗ್ಗೆ ನಾನು ಮೂರು ತಿಂಗಳಿಂದ ಹೇಳುತ್ತಿದ್ದೇನೆ. ಆದ್ರೆ, ಯಾರ ಬಳಿ ಹೇಳಿದರೂ ಮೊದಲಿಗೆ ಮಾತನಾಡುತ್ತಾರೆ. ನಂತರ ಅವರು ನನ್ನ ಫೋನ್ ರಿಸೀವ್ ಮಾಡುವುದಿಲ್ಲ. ಮನೆ ಇಲ್ಲದ ಕಾರಣ ನಾನು ಮನೆಯೂಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಸರ್ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರು ಇರುತ್ತಿದ್ದರೆ ನಾನು ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ ಅಂತಾ ವಿಜಯಲಕ್ಷ್ಮಿ ತಮ್ಮ ನೋವನ್ನ ಹೊರ ಹಾಕಿದ್ದಾರೆ.