ಮಾಸ್ ಮಹಾರಾಜ ರವಿತೇಜ್ ಅವರ 'ಡಿಸ್ಕೋ ರಾಜಾ' ಸಿನಿಮಾದಲ್ಲಿ ಕನ್ನಡದ ಬಸಣ್ಣಿ ವಿಜ್ಞಾನಿ ಪಾತ್ರ ನಿಭಾಯಿಸಲಿದ್ದಾರಂತೆ. ಈಗಾಗಲೇ ತೆಲುಗು ಆಡಿಯನ್ಸ್ಗೆ ತಾನ್ಯಾ ತುಂಬಾ ಪರಿಚಯದ ಹುಡುಗಿ. ನೇನು ಶೈಲಜಾ ಮತ್ತು ಪಟೇಲ್ ಸರ್ ಎಂಬ ಚಿತ್ರಗಳಲ್ಲಿ ನಟಿಸಿರುವ ಈ ಅಮರ್ ಸುಂದರಿ ಈಗ ಮತ್ತೆ ಟಾಲಿವುಡ್ ಮಂದಿಗೆ ಮೋಡಿ ಮಾಡಲು ಸಜ್ಜಾಗಿದ್ದಾರೆ.
'ವಿಜ್ಞಾನಿ'ಯಾದಳು ಸ್ಯಾಂಡಲ್ವುಡ್ನ 'ಬಸಣ್ಣಿ' - ಸ್ಯಾಂಡಲ್ವುಡ್
ಬಜಾರು ನಮ್ದೆ ಇವತ್ತು ಅಂತಾ ಗಾಂಧಿನಗರದಲ್ಲಿ ಕುಣಿದಿದ್ದ ಸ್ಯಾಂಡಲ್ವುಡ್ನ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಈಗ ಟಾಲಿವುಡ್ಗೆ ಹಾರಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಂ
ಈಗಾಗಲೇ 'ಡಿಸ್ಕೋ ರಾಜಾ' ಸಿನಿಮಾದಲ್ಲಿ ನಭಾ ನಟಿಶ್ ಹಾಗೂ RX 100 ಸಿನಿಮಾ ಖ್ಯಾತಿಯ ಪಾಯಲ್ ರಜಪೂತ್ ನಟಿಸುತ್ತಿದ್ದಾರೆ. ಈಗ ತಾನ್ಯಾ ಹೋಪ್ ಕೂಡ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.
ಇನ್ನು ದರ್ಶನ್ ಜತೆ ಯಜಮಾನ ಸಿನಿಮಾದಲ್ಲಿ ನಟಿಸಿದ್ದ ತಾನ್ಯಾ ಹೋಪ್ ದೊಡ್ಡ ಯಶಸ್ಸು ಪಡೆದರು. ಇದಾದ ನಂತರ ಅಂಬಿ ಪುತ್ರ ಅಭಿ ಜತೆ ಅಮರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಇತ್ತ ಬಾಲಿವುಡ್ನಲ್ಲಿ ರಿಮೇಕ್ ಆಗಲಿರುವ ನಾಗಶೇಖರ್ ಅವರ ಮೈನಾ ಚಿತ್ರಕ್ಕೂ ತಾನ್ಯಾನೇ ನಾಯಕಿ ಅಂತಾ ಮಾತು ಕೇಳಿ ಬರುತ್ತಿದೆ. ಇದೆಲ್ಲರ ನಡುವೆ ಈಗ ತೆಲುಗು ಚಿತ್ರ ಒಪ್ಪಿಕೊಂಡಿದ್ದಾರೆ.