ಕರ್ನಾಟಕ

karnataka

ETV Bharat / sitara

ದಚ್ಚು ಜತೆ ನಟಿಸಿದ್ದ ಕನ್ನಡತಿ ತಮಿಳು ಬಿಗ್​ಬಾಸ್​​​ ಮನೆಯಲ್ಲಿ ಪ್ರತ್ಯಕ್ಷ

ಕನ್ನಡದ ನಟಿ ಶಿರಿನ್ ಶೃಂಗಾರ ಸದ್ಯ ತಮಿಳಿನ ಬಿಗ್​ಬಾಸ್​ ಸೀಸನ್​​​ 3ರಲ್ಲಿ ಸ್ಪರ್ಧಿಯಾಗಿದ್ದಾರೆ. ಕಮಲ್ ಹಾಸನ್​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ರಿಯಾಲಿಟಿ ಶೋನಲ್ಲಿ ಕನ್ನಡತಿ ಕಮಾಲ್ ಶುರುವಾಗಿದೆ.

ಕನ್ನಡತಿ ಕಮಾಲ್​​

By

Published : Jun 26, 2019, 8:18 AM IST

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಶಿರಿನ್​ ಚಿಕ್ಕವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು. ತಮ್ಮ 16 ನೇ ವಯಸ್ಸಿನಲ್ಲೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರ ಧ್ರುವ ಚಿತ್ರಕ್ಕೆ ನಾಯಕಿಯಾಗಿ ಅಭಿನಯಕ್ಕೂ ಎಂಟ್ರಿಯಾಗಿದ್ದರು. ಚೊಚ್ಚಲ ಚಿತ್ರದಲ್ಲೇ ಸ್ಟಾರ್​​ ನಟ ದಚ್ಚು ಜತೆ ತೆರೆ ಹಂಚಿಕೊಂಡಿದ್ದ ಈ ಸುಂದರಿ, 2006ರಲ್ಲಿ ಬಿಡುಗಡೆಯಾಗಿದ್ದ 'ಭೂಪತಿ' ಸಿನಿಮಾದಲ್ಲಿ ಮತ್ತೆ ದಾಸನಿಗೆ ಜತೆಯಾಗಿದ್ದರು. ಅದಾದ ಬಳಿಕ ಕನ್ನಡದ AK 56, ಸಿಹಿಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದ ಶಿರಿನ್, ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ನಟಿ ಶಿರಿನ್ ಶ್ರೀಂಗಾರ

ಇನ್ನು ಕನ್ನಡದ ಟಾಪ್ ಹೀರೋ ಯಜಮಾನನ ಜತೆ ನಟಿಸಿರೋ ಈ ಕನ್ನಡದ ಹುಡುಗಿಯನ್ನು ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಿ ಕನ್ನಡಿಗರು ಖುಷಿಯಾಗಿದ್ದಾರೆ. ಡಿ ಬಾಸ್ ಜೊತೆ ನಟಿಸಿದ್ರೆ ಅದೃಷ್ಟ ಕುಲಾಯಿಸುತ್ತೆ ಅನ್ನೋದು ಸತ್ಯ ಅನಿಸಿದೆ. ಈ ನಟಿಯನ್ನ ಬಿಗ್​ಬಾಸ್​​ನಲ್ಲಿ ನೋಡಿದ ಮೇಲೆ ಅದು ಮತ್ತೊಮ್ಮೆ ಸಾಬೀತಾಗಿದೆ ಎಂಬುದು ದಚ್ಚು ಅಭಿಮಾನಿಗಳ ಮಾತಾಗಿದೆ.

ನಟಿ ಶಿರಿನ್ ಶೃಂಗಾರ

ABOUT THE AUTHOR

...view details