ರಾಗಿಣಿ, ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾದಲ್ಲಿ ಶರಣ್ ಜೊತೆ ನಾಯಕಿ ಆಗಿ ಎನ್ಆರ್ಐ ಹುಡುಗಿ ಪಾತ್ರ ನಿಭಾಯಿಸಿದ್ದಾರೆ. ಇವರ ಸಹೋದರ ರುದ್ರಾಕ್ಷ್ ದ್ವಿವೇದಿ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಅತಿ ಮುಖ್ಯ ವಿಚಾರ ಏನಂದ್ರೆ ರಾಗಿಣಿ ಹಾಗೂ ಶರಣ್ ಅವರ ಎತ್ತರದ ಬಗ್ಗೆ ನಡೆದ ಚರ್ಚೆ. ಈ ಬಗ್ಗೆ ಮಾತನಾಡುವ ಮದಕರಿಯ ನಾಯಕಿ 'ನನ್ನ ಹೈಟ್ 5 ಅಡಿ ಎಂಟುವರೆ ಇಂಚು. ಆದರೆ, ಶರಣ್ ಅವರದು 5.9 ಫೀಟ್. ನಾನು ಯಾವಾಗಲೂ ಧರಿಸುವ ಚಪ್ಪಲಿ ಎತ್ತರದ್ದು.ಹಾಗಾಗಿ ಎಲ್ಲರಿಗೂ ನಾನೇ ಎತ್ತರ ಅಂತ ಅನ್ನಿಸಿರಬೇಕು. ಈ ಚರ್ಚೆ ನಾನು ಹಾಗೂ ಶರಣ್ ಈ ಹಿಂದೆ ವಿಕ್ಟರಿ ಸಿನಿಮಾದ ‘ಯಕ್ಕ ನಿನ್ ಮಗಳು' ಸಮಯದಲ್ಲೂ ಆಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.