2010 ರಲ್ಲಿ ‘ನಮ್ ಏರಿಯಾದಲ್ಲಿ ಒಂದಿನ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮೇಘನಾ, 'ವಿನಾಯಕ ಗೆಳೆಯರ ಬಳಗ', 'ತುಘಲಕ್', ಸಿಂಪಲ್ ಆಗ್ ಇನ್ನೊಂದು ಲವ್ ಸ್ಟೋರಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ನವರಸ ನಾಯಕ ಜಗ್ಗೇಶ್ ಜತೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೀತ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಅವರ ಈ ಚಿತ್ರ ಮುಗಿಯವುದೊರಳಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಹೊಸ ಚಿತ್ರದಲ್ಲಿ ಚಾರ್ಮಿನಾರ್ ಚೆಲುವೆ ಮೇಘನಾ - undefined
ಕನ್ನಡ ಚಿತ್ರರಂಗದಲ್ಲಿ 9 ವರ್ಷಗಳಿಂದ ಅಭಿನಯಿಸುತ್ತಿರುವ ಚಾರ್ಮಿನಾರ್ ಚೆಲುವೆ ಮೇಘನಾ ಗಾಂವ್ಕರ್ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
![ಹೊಸ ಚಿತ್ರದಲ್ಲಿ ಚಾರ್ಮಿನಾರ್ ಚೆಲುವೆ ಮೇಘನಾ](https://etvbharatimages.akamaized.net/etvbharat/prod-images/768-512-3645013-thumbnail-3x2-megana.jpg)
ಮೇಘನಾ
ಕಿರು ಚಿತ್ರಗಳ ನಿರ್ದೇಶಕ ಸಂತೋಷ್. ಜಿ ಅವರ ಹೊಸ ಚಿತ್ರಕ್ಕೆ ಮೇಘನಾ ನಾಯಕಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ಮದುವೆ ಸುತ್ತ ಬರುವ ನಾಲ್ಕು ಉಪಕತೆಗಳು ಬಹಳ ಇಷ್ಟವಾಯಿತು. ಅದಕ್ಕೆ ಈ ಸಿನಿಮಾ ಒಪ್ಪಿಕೊಂಡೆ ಎಂದು ಮೇಘನಾ ತಿಳಿಸುತ್ತಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಿದ್ದಾರ್ಥ್ ನಾಯಕ ಆಗಿ ಆಯ್ಕೆ ಆಗಿದ್ದಾರೆ. ಜುಲೈ ತಿಂಗಳಿನಲ್ಲಿ ಸೆಟ್ಟೇರಲಿರುವ ಈ ಸಿನಿಮಾಕ್ಕೆ ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ.