ಕೊರೊನಾ ವೈರಸ್ ಹಾವಳಿಗೆ ಇಡೀ ದೇಶವೇ ತತ್ತರಿಸಿದೆ. ತಮ್ಮ ಕೆಲಸಗಳನ್ನು ಬಿಟ್ಟು, ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೆ ಇದೇ ಕಥೆ. ಫೋಟೋಶೂಟ್, ಶೂಟಿಂಗ್, ಸಿನಿಮಾ ಪ್ರಮೋಷನ್, ಪಾರ್ಟಿ ಅಂತೆಲ್ಲಾ ತಿರುಗುತ್ತಿದ್ದ ಸ್ಟಾರ್ಗಳು ಒಂದು ತಿಂಗಳಿನಿಂದ ಮನೆಯಲ್ಲೇ ಲಾಕ್ ಆಗಿದ್ದಾರೆ. ಇನ್ನು ನಮ್ಮ ಮನೆಯಲ್ಲಿ ಕುಳಿತಿದ್ದರೂ ಹೊಸ ಹೊಸ ಕೆಲಸಗಳನ್ನು ಕಲಿಯುತ್ತಾರಂತೆ. ಹಾಗಿದ್ರೆ ಈ ನಟಿಮಣಿಯರು ಕಲಿತ ಹೊಸ ವಿಷಯವೇನು ನೋಡೋಣ ಬನ್ನಿ.
ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀವಾತ್ಸವ್ ಈಗ ಕೈಯಲ್ಲಿ ಬ್ರಶ್ ಹಿಡಿದು ತಮ್ಮಗೆ ಇಷ್ಟವಾದ ಪೇಯ್ಟಿಂಗ್ ಮಾಡುತ್ತಿದ್ದಾರೆ. ಶಾನ್ವಿ ಚಿಕ್ಕವರಿದ್ದಾಗ ಪೇಯ್ಟಿಂಗ್ನಲ್ಲಿ ಹೆಚ್ಚು ಆಸಕ್ತಿ ಇತ್ತಂತೆ. ಶಾನ್ವಿಯ ಮತ್ತೊಂದು ಹೊಸ ಟ್ಯಾಲೆಂಟ್ ಅಂದ್ರೆ ವೆರೈಟಿ ಅಡುಗೆ ಟೈ ಮಾಡುವುದು. ಹೀಗೆ ಶೂಟಿಂಗ್ನಲ್ಲಿ ತಾವು ಬ್ಯುಸಿ ಇದ್ದಾಗ ಕಲಿಯಲು ಆಗದಂತ ವಿಷಯಗಳನ್ನು ಶಾನ್ವಿ ಈಗ ಕಲಿಯುತ್ತಿದ್ದಾರಂತೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರ ಜೊತೆ ನಟಿಸಿರುವ ಚೆಲುವೆ ಡಿಂಪಲ್ ಕ್ವೀನ್ ರಚಿತಾ ರಾಮ್. ಈಗ ಲಾಕ್ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಅಮ್ಮನಿಗೆ ಅಡುಗೆ ಮಾಡುವುದರಲ್ಲಿ ಸಹಾಯ ಮಾಡುವುದು, ತಮಗೆ ಇಷ್ಟವಾದ ವೆಬ್ ಸೀರೀಸ್ಗಳನ್ನು ನೋಡುತ್ತಿದ್ದಾರಂತೆ ರಚಿತಾ. ಜೊತೆಗೆ ತಮ್ಮ ಗೊಂಬೆಗಳು ಹಾಗೂ ಮುದ್ದಾದ ಶ್ವಾನಗಳ ಜೊತೆ ರಚಿತಾ ಟೈಂ ಪಾಸ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಮಹಿಳಾ ಪ್ರಧಾನ ಚಿತ್ರಗಳೊಂದಿಗೆ ಹೆಚ್ಚು ಗಮನ ಸೆಳೆಯುತ್ತಿರುವ ಬ್ಯೂಟಿ ಕ್ವೀನ್ ಹರಿಪ್ರಿಯಾ ತಮ್ಮ ತಂದೆ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಹರಿಪ್ರಿಯಾಗೆ ಬಾಲ್ಯದಿಂದಲೂ ಪೇಯ್ಟಿಂಗ್ ಮಾಡೋದು ಇಷ್ಟವಂತೆ. ಹಾಗಾಗಿ ಹರಿಪ್ರಿಯಾ ಚಿತ್ರಕಲೆ ಮಾಡುವುದರಲ್ಲಿ ಕೂಡಾ ಖುಷಿ ಇದೆಯಂತೆ.