ಕರ್ನಾಟಕ

karnataka

ETV Bharat / sitara

'ಶಾನೆ ಟಾಪಾಗವ್ಳೆ ಸುಂದ್ರಿ' ಅದಿತಿಯ ಫಿಟ್ನೆಸ್ ಮಂತ್ರ ಏನು? - undefined

ಚಂದನವನದ ನಟಿ ಅದಿತಿ ಪ್ರಭುದೇವ್ ತಮ್ಮ ಫಿಟ್ನೆಸ್ ಗುಟ್ಟು ರಿವೀಲ್ ಮಾಡಿದ್ದಾರೆ. ಹಾಗಾದರೆ ಅವರ ಸೌಂದರ್ಯ ಸಿರಿಯ ಸೀಕ್ರೆಟ್ ಏನು ಅಂತೀರಾ?

ಅದಿತಿ

By

Published : Jun 21, 2019, 9:19 PM IST

ಸೆಲಬ್ರಿಟಿಗಳಿಗೆ ಫಿಟ್ನೆಸ್​ ಕಾಪಾಡಿಕೊಳ್ಳುವುದು​ ದೊಡ್ಡ ಟಾಸ್ಕ್. ಅದರಲ್ಲೂ ನಟಿಮಣಿಯರಂತೂ ತಮ್ಮ ಸೌಂದರ್ಯ,ಫಿಟ್ನೆಸ್ ಬಗ್ಗೆ ತುಂಬಾನೇ ಕೇರ್ ತಗೋತಾರೆ.

ಸದ್ಯ ಚಂದನವನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ಯೂಟ್ ಹುಡ್ಗಿ ಅದಿತಿ ಪ್ರಭುದೇವ್​ ನಟನೆ ಜತೆಗೆ ಫಿಟ್ನೆಸ್​ಗೆ ಹೆಸರು ಮಾಡಿದ್ದಾರೆ. ಶಾನೆ ಟಾಪ್ ಆಗಿರೋ ಈ ಬೆಡಗಿಯ ಫಿಟ್ನೆಸ್ ಮಂತ್ರ ಏನು ಎಂಬುದನ್ನು ಹಂಚಿಕೊಂಡಿದ್ದಾರೆ 'ಸಿಂಗ'ನ ಸುಂದ್ರಿ.

ನಟಿ ಅದಿತಿಯ ಫಿಟ್ನೆಸ್ ಮಂತ್ರ ಏನು?

ಈ ಮುದ್ದುಮುಖದ ಚೆಲುವೆ ಬೆಳಗ್ಗೆ ಎದ್ದ ತಕ್ಷಣ ಮುದ್ದಿನ ನಾಯಿಮರಿ ಜೊತೆ ಆಟ ಆಡುವ ಮೂಲಕ ದಿನಚರಿ ಆರಂಭಿಸುತ್ತಾರಂತೆ. ಕೆಲ ಹೊತ್ತು ವ್ಯಾಯಾಮ ಮಾಡ್ತಾರಂತೆ. ಡಯಟ್​​​ನ್ನು ಕಟ್ಟುನಿಟ್ಟಾಗಿ ಪಾಲಿಸುವ ಇವರು ನಿಯಮಿತ ಆಹಾರ ಸೇವಿಸುತ್ತಾರಂತೆ. ಅಲ್ಲದೆ ಸದಾ ನಗುತ್ತಲೇ ಇರುವ ಈ ಹುಡುಗಿ ನಿತ್ಯ 30 ನಿಮಿಷ ಯೋಗಾಸನ ಮಾಡ್ತಾರಂತೆ. ಗೋಬಿ ಮಂಚೂರಿ ಅಂದ್ರೆ ಸಖತ್ ಇಷ್ಟಪಡುವ ಈ 'ಬ್ರಹ್ಮಚಾರಿ'ಯ ಸಖಿ ಮುದ್ದೆ ಬಸ್ಸಾರ್ ಮಾಡೋದ್ರಲ್ಲಿ ಎತ್ತಿದ ಕೈ ಅಂತೆ.

For All Latest Updates

TAGGED:

ABOUT THE AUTHOR

...view details