ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಭಾರತ-ಶ್ರೀಲಂಕಾ ನಡುವೆ ಅಹರ್ನಿಶಿ ಟೆಸ್ಟ್ ಪಂದ್ಯ ಆರಂಭವಾಗಿದೆ. ಪಂದ್ಯ ವೀಕ್ಷಿಸಲು ಶೇ. 100ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ನ ಬಾದ್ಶಾ ಕಿಚ್ಚ ಸುದೀಪ್ ಕೂಡ ಟೆಸ್ಟ್ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದಾರೆ
ನಟ ಕಿಚ್ಚ ಸುದೀಪ್ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್ ಮೇಲೂ ಇನ್ನಿಲ್ಲದ ಪ್ರೀತಿ ಮತ್ತು ಕ್ರೇಜ್. ಅವರೊಬ್ಬ ಕ್ರಿಕೆಟ್ ಪಟು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಸಿಸಿಎಲ್ನಲ್ಲಿ ಕರ್ನಾಟಕ ತಂಡ ಮುನ್ನಡೆಸಿರುವ ಸುದೀಪ್, ಆರ್ಸಿಬಿಯ ದೊಡ್ಡ ಫ್ಯಾನ್ ಕೂಡ ಹೌದು. ಕಳೆದ ವರ್ಷ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆದ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಪತ್ನಿ ಜೊತೆ ಪಂದ್ಯ ವೀಕ್ಷಣೆ ಮಾಡಿದ್ದ ನಟ ಸುದೀಪ್, ಇದೀಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.