ಸ್ಟಾರ್ ನಟ, ನಟಿಯರ ಹುಟ್ಟುಹಬ್ಬ ಬಂತಂದ್ರೆ ಸಾಕು, ಅಭಿಮಾನಿಗಳು ಅವರ ಬರ್ತಡೇಯನ್ನು ಹಬ್ಬದದಂತೆ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ನಲ್ಲಿ, ಯಾವ ಸ್ಟಾರ್ ನಟರು ಸಹ ತಮ್ಮ ಹುಟ್ಟು ಹಬ್ಬವನ್ನ ಅಭಿಮಾನಿಗಳ ಜೊತೆ ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿಲ್ಲ. ಕಾರಣ ಕೊರೊನಾ ಎಂಬ ಹೆಮ್ಮಾರಿ.
ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ?
32ನೇ ವಸಂತಕ್ಕೆ ಕಾಲಿಡುತ್ತಿರೋ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೋವಿಡ್ ಮೂರನೇ ಅಲೆ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಕುರಿತು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಅವರು, ಮನೆಯಿಂದಲೇ ವಿಶ್ ಮಾಡುವಂತೆ ಹೇಳಿದ್ದಾರೆ.
ಅಕ್ಟೋಬರ್ 6ಕ್ಕೆ ಧ್ರುವ ಸರ್ಜಾ ಹುಟ್ಟುಹಬ್ಬ. 32ನೇ ವಸಂತಕ್ಕೆ ಕಾಲಿಡುತ್ತಿರೋ ಆ್ಯಕ್ಷನ್ ಪ್ರಿನ್ಸ್ ಕೂಡಾ ಈಗ ಇದೇ ನಿರ್ಧಾರಕ್ಕೆ ಮುಂದಾಗಿದ್ದಾರೆ. ನಾನು ಹುಟ್ಟು ಹಬ್ಬ ಆಚರಿಕೊಳ್ಳುತ್ತಿಲ್ಲ. ದಯಮಾಡಿ ಯಾರು ಮನೆ ಬಳಿ ಬರಬೇಡಿ. ಅಲ್ಲದೆ, ಶೂಟಿಂಗ್ ಇರುವ ಕಾರಣ ನಾನು ವಿಶಾಖಪಟ್ಟಣಂಗೆ ಹೋಗ್ತಿದ್ದು, ಮನೆಯಲ್ಲಿ ಇರಲ್ಲ. ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ನೀವೆಲ್ಲ ಮನೆ ಬಳಿ ಬಂದು ವಿಶ್ ಮಾಡ್ತಿದ್ರಿ. ಅದ್ರೆ ಈ ವರ್ಷ ನೀವಿರುವ ಸ್ಥಳದಿಂದಲೇ ನನಗೆ ವಿಶ್ ಮಾಡಿ ಎಂದು ಅಭಿಮಾನಿಗಳಿಗೆ ಧ್ರುವ ಮನವಿ ಮಾಡಿದ್ದಾರೆ.
ಸದ್ಯ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರಕ್ಕಾಗಿ ಮತ್ತೆ ಬಾಡಿಯನ್ನ ಹುರಿಗೊಳಿಸಿದ್ದಾರೆ. ಪೋಸ್ಟರ್ ನಿಂದ ಗಮನ ಸೆಳೆಯುತ್ತಿರೋ 'ಮಾರ್ಟಿನ್' ಸಿನಿಮಾ ಚಿತ್ರೀಕರಣಕ್ಕಾಗಿ ವೈಜಾಕ್ಗೆ ಹೋಗುತ್ತಿದ್ದಾರೆ ಎನ್ನಲಾಗ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರೇಮ್ ಜೊತೆ ಧ್ರುವ ಸರ್ಜಾ ಸಿನಿಮಾ ಅನೌನ್ಸ್ ಆಗಿದೆ. ಅಲ್ಲದೆ, ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ 'ಪೊಗರು' ಸಿನಿಮಾದ ನಿರ್ಮಾಪಕ ಗಂಗಾಧರ್ ಜೊತೆ ಮತ್ತೆ ಸಿನಿಮಾ ಮಾಡುವ ಮಾತುಕತೆಯಲ್ಲಿದ್ದಾರೆ ಎನ್ನಲಾಗ್ತಿದೆ.